ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯ – ಡಿಸೆಂಬರ್‌ವರೆಗೆ ಸರ್ಕಾರ ಗಡುವು

ಬೆಂಗಳೂರು: ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯಗೊಳಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ತಿದ್ದುಪಡಿ ಮಾಡಿ ಸರ್ಕಾರ ಅಧಿಸೂಚನೆ ಸೂಚನೆ ಹೊರಡಿಸಿದೆ.

ಈ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರರು ಇನ್ನುಮುಂದೆ ಕಂಪ್ಯೂಟರ್ ಪರೀಕ್ಷೆ ಪಾಸಾಗದಿದ್ದರೆ ಮುಂಬಡ್ತಿ, ವಾರ್ಷಿಕ ವೇತನ ಭಡ್ತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈವರೆಗೆ ಅಧಿಸೂಚನೆ ಹೊರಡಿಸಿದ 10 ವರ್ಷದೊಳಗೆ ಪರೀಕ್ಷೆ ಪಾಸ್ ಮಾಡಿಕೊಳ್ಳಲು ಅವಕಾಶ ನೀಡಿದ್ದ ಸರ್ಕಾರ. ಅದಕ್ಕಾಗಿ 2012ರಲ್ಲೇ ಸರ್ಕಾರ ನಿಯಮ ಜಾರಿಗೊಳಿಸಿತ್ತು. ಈಗ ಮತ್ತೆ ತಿದ್ದುಪಡಿ ಮಾಡಿ ಎಲ್ಲಾ ಸರ್ಕಾರಿ ನೌಕರರು 2022 ಡಿಸೆಂಬರ್ ಅಂತ್ಯದೊಳಗೆ ಕಂಪ್ಯೂಟರ್ ಪರೀಕ್ಷೆ ಪಾಸ್ ಮಾಡಿಕೊಳ್ಳುವಂತೆ ಕಡ್ಡಾಯ ಮಾಡಿ ಗಡುವು ವಿಧಿಸಿದೆ. ಇದನ್ನೂ ಓದಿ: ಗೌರವ್‌ ಗುಪ್ತ ಎತ್ತಂಗಡಿ – ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ವರ್ಗ

ಸರ್ಕಾರಿ ಸೇವೆಯಲ್ಲಿರುವ ಡಿ ಗ್ರೂಪ್ ಹೊರತು ಪಡಿಸಿ ಎಲ್ಲ ನೌಕರರಿಗೂ ಈ ನಿಯಮ ಅನ್ವಯವಾಗಲಿದೆ. 2022 ಡಿಸೆಂಬರ್ 31 ರೊಳಗೆ ಕಂಪ್ಯೂಟರ್ ಪರೀಕ್ಷೆ ಪಾಸ್ ಮಾಡಲು ಸರ್ಕಾರ ಗಡುವು ನೀಡಿದೆ. ಇದನ್ನೂ ಓದಿ: ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕದ ಪಾವತಿಯನ್ನು ಸ್ಥಗಿತಗೊಳಿಸಿದ ಆಪಲ್

Comments

Leave a Reply

Your email address will not be published. Required fields are marked *