ದಿನಕ್ಕೊಂದು ವೇಷ, ಗಂಟೆಗೊಂದು ಕೆಲಸ- ರಾಜಕಾರಣಿ, ಪೊಲೀಸ್ ಅಂತಾ ಆಸ್ಪತ್ರೆ ಸಿಬ್ಬಂದಿಗೆ ಕಿರುಕುಳ

ಬೆಂಗಳೂರು: ದಿನಕ್ಕೊಂದು ವೇಷ, ಗಂಟೆಗೊಂದು ಕೆಲಸ. ಒಂದು ದಿನ ನಾನು ಪೊಲೀಸ್ ಅಂತಾನೆ, ಮತ್ತೊಂದು ದಿನ ಆರ್ ಟಿಐ ಕಾರ್ಯಕರ್ತ ಅಂತಾನೆ, ಮಗದೊಂದು ದಿನ ನಾನು ಖ್ಯಾತ ಪತ್ರಿಕೆಯ ಎಡಿಟರ್ ಅಂತಾ ಹೇಳಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.

ರಮಾನಂದ್ ಸಾಗರ್ ಎಂಬಾತನೇ ದಿನಕ್ಕೊಂದು ವೇಷ ಹಾಕಿಕೊಂಡು ಬಂದು ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ. ಜಯನಗರದ ಸರ್ಕಾರಿ ಆಸ್ಪತ್ರೆಗೆ ದಿನ ಭೇಟಿ ನೀಡೋ ಈ ರಮಾನಂದ, ಆಸ್ಪತ್ರೆ ವೈದ್ಯರು, ನರ್ಸ್ ಗಳಿಗೆ ಬೆದರಿಸಿ ಕಿರುಕುಳ ನೀಡುತ್ತಿದ್ದ ಅಂತಾ ಸಿಬ್ಬಂದಿ ಆರೋಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ದಿನಾಲೂ ಬರ್ತಿದ್ದ ಈ ರಮಾನಂದ ದಿನಕ್ಕೊಂದು ಡಿಸಿಗ್ನೇಷನ್ ಹೇಳ್ಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದನಂತೆ. ಇವನಿಗೆ ಸರಿಯಾಗಿ ಸ್ಪಂದಿಸಿಲ್ಲ ಅಂದ್ರೆ, ನರ್ಸ್ ಗಳನ್ನು ಮಂಚಕ್ಕೆ ಕರೆಯುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಇದರಿಂದ ಬೇಸತ್ತ 70 ವೈದ್ಯರು 200 ಜನ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗದ ಕಾರಣ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರಿಗೆ ದೂರು ನೀಡಿದ್ರು.

ಇದೀಗ ನಾಗಲಕ್ಷ್ಮೀ ಬಾಯಿ, ನಗರ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್‍ಗೆ ದೂರು ನೀಡಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸ್ ಕಮೀಷನರ್ ಈ ನಕಲಿ ಹೀರೋ ಬಂಧಿಸಲು ಆದೇಶಿಸಿದ್ದಾರೆ.

Comments

Leave a Reply

Your email address will not be published. Required fields are marked *