ರಮ್ಯಾ ವಿರುದ್ಧ ಸೈಬರ್ ಕ್ರೈಂಗೆ ದೂರು

ಮಂಡ್ಯ: ಮಾಜಿ ಸಂಸದೆ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ಸೈಬರ್ ಕ್ರೈಂಗೆ ದೂರು ಸಲ್ಲಿಕೆಯಾಗಿದೆ. ನಕಲಿ ಖಾತೆ ಬಗ್ಗೆ ರಮ್ಯಾ ನೀಡಿದ್ದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ನರೇಂದ್ರ ಮೋದಿ ವಿಚಾರ್ ಮಂಚ್‍ನ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ದೂರು ನೀಡಿದ್ದಾರೆ. ಇದನ್ನೂ ಓದಿ: ಫೇಕ್ ಖಾತೆ ಹೊಂದಿದ್ರೆ ತಪ್ಪಲ್ಲ : ರಮ್ಯಾ ಮೇಡಂ ಪಾಠದ ವಿಡಿಯೋ ಫುಲ್ ವೈರಲ್

ಫೇಸ್‍ಬುಕ್ ನಲ್ಲಿ ಒಬ್ಬರಿಗೆ ಹಲವಾರು ಖಾತೆಗಳಿದ್ದರೆ ತಪ್ಪಿಲ್ಲ ಎಂದು ರಮ್ಯಾ ಕಾರ್ಯಕರ್ತರಿಗೆ ಪಾಠ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿ ಸೂಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ:   ಫೇಕ್ ಅಕೌಂಟ್ ಪಾಠದ ವಿಡಿಯೋ ಬಗ್ಗೆ ರಮ್ಯಾ ಮೇಡಂ ಹೀಗಂದ್ರು

ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯಿಂದ ಸಾಕಷ್ಟು ಯಡವಟ್ಟುಗಳಾಗುತ್ತಿವೆ. ಈ ಹಿಂದೆ ರಾಹುಲ್‍ಗಾಂಧಿ ಟ್ವೀಟ್ ಪರಿಶೀಲಿಸಿದಾಗ ನಕಲಿ ಖಾತೆಗಳಿಂದ ಅವರ ಟ್ವೀಟ್‍ಗೆ ರೀಟ್ವೀಟ್ ಬಂದಿದ್ದವು. ರಷ್ಯಾ, ಅಫ್ಘಾನಿಸ್ತಾನ, ಇಂಡೋನೇಷ್ಯಾದಿಂದ ರೀಟ್ವೀಟ್ ಬಂದಿತ್ತು. ರಮ್ಯಾ ಅವರ ಹೆಸರಿನಲ್ಲಿ 50ಕ್ಕೂ ಹೆಚ್ಚು ಫೇಸ್‍ಬುಕ್ ಖಾತೆಗಳಿದ್ದು, ಅದನ್ನು ಪರಿಶೀಲಿಸಬೇಕು. ರಮ್ಯಾ ಹೇಳಿಕೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ: ಮುಗಿಯದ ರಮ್ಯಾ-ಜಗ್ಗೇಶ್ ಟ್ವೀಟ್ ಜಗಳ – ಫೇಕ್ ಪಾಠ ಹಿಡಿದು ಜಗ್ಗಾಡಿದ ನಟ 

https://www.youtube.com/watch?v=FPbeaJ04p7o

Comments

Leave a Reply

Your email address will not be published. Required fields are marked *