ರಶ್ ಆಗಿದ್ದ ರೈಲಿನಲ್ಲಿ ಸೀಟ್ ಪಡೆಯೋಕೆ ಏನು ಮಾಡಿದ ನೋಡಿ

ಬೀಜಿಂಗ್: ರಶ್ ಆಗಿರೋ ಬಸ್ ಅಥವಾ ಮೆಟ್ರೋದಲ್ಲಿ ಪ್ರಯಾಣಿಸುವಾಗ ಒಂದು ಸೀಟ್ ಸಿಕ್ಕರೆ ಅದೇ ಪುಣ್ಯ ಅನ್ಕೋತೀವಿ. ಆದ್ರೆ ಇಲ್ಲೊಬ್ಬ ಸೀಟ್ ಪಡೆಯೋಕೆ ಏನು ಮಾಡಿದ ಅಂತ ನೋಡಿದ್ರೆ ಅಯ್ಯೋ ಇವ್ನಾ… ಏನ್ ನಾಟಕ ಮಾಡ್ತಾನ್ರೀ! ಅಂತೀರ.

ಕಿಕ್ಕಿರಿದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸೀಟ್ ಸಿಗದೆ ಬೇಸತ್ತು ನೆಲದ ಮೇಲೆ ಬಿದ್ದು ಫಿಟ್ಸ್(ಅಪಸ್ಮಾರ) ಬಂದವನಂತೆ ಒದ್ದಾಡಿದ್ದಾನೆ. ಆದ್ರೆ ಆತನಿಗೆ ಸಹಾಯ ಮಡೋ ಬದಲು ಸೀಟ್‍ನಲ್ಲಿ ಕುಳಿತಿದ್ದವರು ಥಟ್ಟಂತ ಮೇಲೆದ್ದು ದೂರ ಹೋಗಿದ್ದಾರೆ.

 

ಈತ ನಾಟಕ ಮಾಡ್ತಿದ್ದಾನೆ ಅಂತ ಗೊತ್ತಿಲ್ಲದೆ ಇನ್ನೂ ಕೆಲವು ಪ್ರಯಾಣಿಕರು, ಅಯ್ಯೋ ಏನಾಯ್ತಪ್ಪಾ… ಅಂತ ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ನಂತರ ಕೆಳಗೆ ಬಿದ್ದ ವ್ಯಕ್ತಿ ಮೇಲೆದ್ದು, ಖಾಲಿಯಾಗಿದ್ದ ಸೀಟ್ ಮೇಲೆ ಕುಳಿತು ಪಕ್ಕದಲ್ಲಿದ್ದವರಿಗೆ ನಗು ಬೀರಿದ್ದಾನೆ.

ಈ ಘಟನೆ ಚೀನಾದಲ್ಲಿ ನಡೆದಿದೆ ಅಂತ ಹೇಳಲಾಗಿದೆ. ಆದ್ರೆ ನಿರ್ದಿಷ್ಟವಾಗಿ ಯಾವಾಗ, ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೋ ಮೊದಲು ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದು, ಚೀನಾದ ರೈಲುಗಳಲ್ಲಿ ಸೀಟ್ ಪಡೆಯಬೇಕಾದ್ರೆ ಏನು ಮಾಡ್ಬೇಕು ಅನ್ನೋ ಶೀರ್ಷಿಕೆ ನೀಡಲಾಗಿತ್ತು. ಅಂದಿನಿಂದ ಈ ವಿಡಿಯೋ ವೈರಲ್ ಆಗಿದೆ.

https://www.youtube.com/watch?v=60xj8KjaEsw

Comments

Leave a Reply

Your email address will not be published. Required fields are marked *