‘ಉಸಿರೇ ಉಸಿರೇ’ ಅಂತಿದ್ದಾರೆ ಕಾಮಿಡಿ ಮಹಾರಾಜ್ ಸಾಧುಕೋಕಿಲ

ಬಿಗ್ ಬಾಸ್ ಖ್ಯಾತಿಯ ರಾಜೀವ್ ನಾಯಕರಾಗಿ ನಟಿಸುತ್ತಿರುವ “ಉಸಿರೇ ಉಸಿರೇ” ಚಿತ್ರದಲ್ಲಿ ಖ್ಯಾತ ನಟ ಸಾಧುಕೋಕಿಲ ಅಭಿನಯಿಸುತ್ತಿದ್ದಾರೆ. ಇವರ ನಟನೆಯ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ತಮ್ಮ ಅದ್ಭುತ ಕಾಮಿಡಿ ಮೂಲಕ ಜನರನ್ನು ರಂಜಿಸುವ ಸಾಧುಕೋಕಿಲ ಅವರು ಈ ಚಿತ್ರದಲ್ಲಿ ಕಾಮಿಡಿ ಮಾತ್ರ ಮಾಡುವುದಿಲ್ಲ. ಅದರ ಜೊತೆಗೆ ಬೇರೆ ರೀತಿಯ ಪಾತ್ರದಲ್ಲೂ ಸಾಧು    ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕ ಸಿ.ಎಂ.ವಿಜಯ್  ತಿಳಿಸಿದ್ದಾರೆ.

ಈಗಾಗಲೇ ತೆಲುಗಿನ ಖ್ಯಾತ ಹಾಸ್ಯನಟರಾದ ಬ್ರಹ್ಮಾನಂದಂ ಹಾಗೂ ಆಲಿ ಅವರು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಸಹ ವಿಶೇಷಪಾತ್ರದಲ್ಲಿ ಅಭಿನಯಿಸಲಿದ್ದು, ಸದ್ಯದಲ್ಲೇ ಚಿತ್ರೀಕರಣ ನಡೆಯಲಿದೆ.  ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.

ಇದು ಪ್ರೇಮಕಥೆಯ ಚಿತ್ರ. ಆದರೆ ಮಾಮೂಲಿ ಪ್ರೇಮಕಥೆಯ ಚಿತ್ರವಾಗಿರದೆ,  ಪ್ರೇಮಕಥೆಯ ಮೂಲಕ ಹೊಸ ಇತಿಹಾಸ ಸೃಷ್ಟಿಸುವ ಚಿತ್ರವಾಗಲಿದಯಂತೆ.   ಎನ್ ಗೊಂಬೆ ಕ್ರಿಯೇಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಸಿ.ಎಂ.ವಿಜಯ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಒಂದು ಹಾಡನ್ನು ಕೂಡ ವಿಜಯ್ ಅವರೆ ಬರೆದಿದ್ದಾರೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಅವರ ಸಂಗೀತ  ನಿರ್ದೇಶನವಿದೆ. ಮನು ಬಿ.ಕೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.  ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿತ ಘೋಷ್ ಅಭಿನಯಿಸುತ್ತಿದ್ದಾರೆ. ದೇವರಾಜ್, ಬ್ರಹ್ಮಾನಂದಂ, ಆಲಿ, ಸಾಧುಕೋಕಿಲ, ತಾರಾ, ಮಂಜು ಪಾವಗಡ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ ಮುಂತಾದವರ ಅದ್ದೂರಿ ತಾರಾಬಳಗ ಈ ಚಿತ್ರಕ್ಕಿದೆ.

Live Tv

Comments

Leave a Reply

Your email address will not be published. Required fields are marked *