ಪಾಠ ಮುಗಿದಿಲ್ಲ, ರಿವಿಜನ್ ಆಗಿಲ್ಲ: ವಿದ್ಯಾರ್ಥಿನಿ

ಉಡುಪಿ: ಹಿಜಬ್ ವಿವಾದದ ಆ ಆರು ಮಂದಿ ಹಿಜಬ್ ಹೋರಾಟಗಾರ್ತಿಯರಿಂದ 900 ವಿದ್ಯಾರ್ಥಿನಿಯರ ಓದಿಗೆ ಕಷ್ಟವಾಗಿದೆ ಎಂದು ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ವಿದ್ಯಾರ್ಥಿಬಿ ಭಾರತಿ ಮಾತನಾಡಿ, ನಮಗೆ ಬಹಳ ಭಯದ ವಾತಾವರಣ ಉಂಟಾಗಿದೆ. ಇನ್ನೆರಡು ತಿಂಗಳಲ್ಲಿ ಪಿಯು ಬೋರ್ಡ್ ಪರೀಕ್ಷೆ ನಡೆಯಲಿದೆ. ಪಾಠ ಇನ್ನೂ ಕಂಪ್ಲೀಟ್ ಆಗದೆ ಬಹಳ ಸಮಸ್ಯೆಯಾಗಿದೆ. ಪಾಠ ಮುಗಿಯುವುದು ಯಾವಾಗ? ರಿವಿಜನ್ ಮಾಡುವುದು ಯಾವಾಗ? ಅವರು ಇನ್ನೂ ಹೋರಾಟ ಬಿಡುವ ಲಕ್ಷಣ ಕಾಣುತ್ತಿಲ್ಲ ಎಂದರು.

ಬೇರೆ ಬೇರೆ ಸಂಘಟನೆಗಳನ್ನು ಕರೆಸಿ ತರಗತಿ, ಕಂಪೌಂಡಿನಲ್ಲಿ ಗಲಾಟೆ ಮಾಡುತ್ತಿದ್ದಾರೆ. ನಾನು ಅದೇ ಕಾಲೇಜು ಕ್ಯಾಂಪಸ್‍ನಲ್ಲಿ 5 ವರ್ಷಗಳಿಂದ ಓದುತ್ತಿದ್ದೇನೆ. ತರಗತಿಯಲ್ಲಿ ಹಿಜಬ್‍ಗೆ ಮೊದಲಿನಿಂದಲೂ ಅವಕಾಶ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

ಈ ಹಿಂದೆ ಹಿಜಬ್ ಹೋರಾಟಗಾರ್ತಿಯರು ಹಿಜಬ್‍ಗೆ ಎಲ್ಲರೂ ಬೆಂಬಲಿಸಿ ಎಂದಿದ್ದರು. ನಾವು ಯಾರೂ ಹಿಜಬ್ ಹೋರಾಟಕ್ಕೆ ಬೆಂಬಲ ನೀಡಿಲ್ಲ. ಯಾವ ಶಿಕ್ಷಕರು ಕೂಡಾ ಅವರಿಗೆ ಬೆಂಬಲಿಸಿಲ್ಲ. ಸಂಸ್ಥೆಯಲ್ಲಿ 90 ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದವರಿದ್ದಾರೆ. ಉಳಿದ ಎಲ್ಲರೂ ಕಲಿಕೆಯಲ್ಲಿ ತಲ್ಲೀನರಾಗಿದ್ದು, ಎಜುಕೇಶನ್ ಇಂಪಾರ್ಟೆಂಟ್ ಅಂತ ಯಾರೂ ಹಿಜಬ್ ಧರಿಸುತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ

ಆದರೆ ಆ ಆರು ಜನ ಹಿಜಬ್ ಹೋರಾಟಗಾರ್ತಿಯರು ಯಾರು ಹೇಳಿದರು ಕೇಳುತ್ತಿಲ್ಲ. ಹಿಜಬ್ ತೆಗೆದು ತರಗತಿಗೆ ಬಂದರೆ ಎಂದಿನಂತೆ ಪಾಠ ನಡೆಯುತ್ತದೆ. ಆದರೆ ಅವರು ಹಿಜಬ್ ತೆಗೆದು ತರಗತಿಗೆ ಬರುವ ಹಾಗೇ ಕಾಣುತ್ತಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *