ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್

– ಡಿಸಿಸಿ ಬ್ಯಾಂಕ್ ಸಾಲ ಮಂಜೂರಾತಿಗೆ ರಾಜಣ್ಣ ಹಿಂದೇಟು

ತುಮಕೂರು: ಹನಿಟ್ರ‍್ಯಾಪ್ (Honey Trap) ಸದ್ದು ರಾಜ್ಯದಲ್ಲಿ ಜೋರಾಗಿ ಕೇಳುತ್ತಿದೆ. ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹಾಗೂ ಅವರ ಪುತ್ರ ಎಮ್‌ಎಲ್‌ಸಿ ರಾಜೇಂದ್ರ ರಾಜಣ್ಣರನ್ನು (MLC Rajendra Rajanna) ಹನಿಟ್ರ‍್ಯಾಪ್ ಖೆಡ್ಡಾ ತೋಡಿದ್ದು ಬಯಲಾಗಿದೆ. ಈ ಮಧು ಜಾಲದ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆದರೆ ಪ್ರತಿಪಕ್ಷಗಳು ಮಾತ್ರ ಡಿಸಿಎಂ ಡಿಕೆಶಿ ವಿರುದ್ಧ ಬೊಟ್ಟು ಮಾಡಿ ತೋರಿಸುತ್ತಿದೆ. ಈ ನಡುವೆ ತುಮಕೂರು ಜಿಲ್ಲೆಯಲ್ಲಿ ಡಿಕೆಶಿ ವರ್ಸಸ್ ಸಿದ್ದರಾಮಯ್ಯರ ಬಣದ ಶೀತಲ ಸಮರ ಶುರುವಾಗಿದೆ. ಡಿಕೆ ಶಿವಕುಮಾರ್ ಸಂಬಂಧಿಯಾದ ಕುಣಿಗಲ್ ಶಾಸಕ ಡಾ. ರಂಗನಾಥ್ ವಿರುದ್ಧ ರಾಜೇಂದ್ರ ರಾಜಣ್ಣ ಹರಿಹಾಯ್ದಿದ್ದಾರೆ.

ರಾಮನಗರಕ್ಕೆ ನೀರು ಕೊಂಡೊಯ್ಯುವ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿಸಿದ್ದಕ್ಕೆ ಶಾಸಕ ರಂಗನಾಥ್ (Dr Ranganath) ತಮ್ಮ ಬೆಂಬಲಿಗರಿಂದ ಧಮ್ಕಿ ಹಾಕಿದ್ದಾರೆ ಎಂದು ರಾಜೇಂದ್ರ ರಾಜಣ್ಣ ದೂರಿದ್ದಾರೆ. ಪ್ರಭಾವಿಗಳು ಇವರ ಜೊತೆ ಇದ್ದಾರೆ ಎಂಬ ಮಾತ್ರಕ್ಕೆ ಜಿಲ್ಲೆಗೆ ಅನ್ಯಾಯ ಮಾಡಿ ನೀರು ಕೊಡಲು ಸಾಧ್ಯವೇ ಎಂದು ಖಾರವಾಗಿ ರಾಜೇಂದ್ರ ಪ್ರಶ್ನಿಸಿದ್ದಾರೆ. ಇದು ಡಿಕೆಶಿ ಬಣದ ಕಾಂಗ್ರೆಸ್ ಶಾಸಕರನ್ನು ಕೆರಳಿಸಿದೆ. ಇದನ್ನೂ ಓದಿ: ಶಿರಸಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

ಇನ್ನೊಂದೆಡೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ರಾಜಣ್ಣ‌ (KN Rajanna) ಕುಣಿಗಲ್ ಕ್ಷೇತ್ರದ ರೈತರಿಗೆ ಸಾಲ ಕೊಡುತ್ತಿಲ್ಲ ಎಂದು ಶಾಸಕ ರಂಗನಾಥ್ ಸದನದಲ್ಲಿ ಆರೋಪ ಮಾಡಿದರು. ಇದು ಕೂಡ ಮೌನ ಸಮರಕ್ಕೆ ಕಾರಣವಾಗಿದೆ. ರಾಜಣ್ಣರ ಪುತ್ರ ಗೆಲ್ಲಲು ಕುಣಿಗಲ್ ಕ್ಷೇತ್ರದ ಪಂಚಾಯತಿ ಸದಸ್ಯರುಗಳ ಋಣ ಇದೆ. ಇದನ್ನು ಅಪ್ಪ ಮಗ ಮರೆಯಬಾರದು ಎಂದು ಶಾಸಕ ರಂಗನಾಥ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: IPL 2025: ಗಾಯಕ್ವಾಡ್‌, ರಚಿನ್‌ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ

ಒಟ್ಟಾರೆ ಕುಣಿಗಲ್ ಶಾಸಕ ರಂಗನಾಥ್, ಗುಬ್ಬಿ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ಗೌರಿಶಂಕರ್, ಮಾಜಿ ಸಚಿವ ಟಿ ಬಿ ಜಯಚಂದ್ರ ಡಿಕೆಶಿ ಪರವಾಗಿ ಇದ್ದಾರೆ ಎನ್ನಲಾಗಿದೆ. ಹನಿಟ್ರ‍್ಯಾಪ್ ವಿಚಾರ ಈ ಬಣಗಳ ನಡುವಿನ ಕಂದಕ ಇನ್ನಷ್ಟು ಹೆಚ್ಚು ಮಾಡಿದೆ. ಇದನ್ನೂ ಓದಿ: ಕುಕ್ಕೆ ಆಡಳಿತ ಮಂಡಳಿಯಲ್ಲಿ ಮಾಜಿ ರೌಡಿಶೀಟರ್‌ಗೆ ಸ್ಥಾನ ಕೊಡಲು ಸಚಿವರ ಯತ್ನ?