ಕೊಡಗು ಸಂತ್ರಸ್ತರಿಗೆ ಸಂಪೂರ್ಣ ವ್ಯಾಪಾರದ ಹಣ ನೀಡಲು ಕಾಫಿಶಾಪ್ ಮಾಲೀಕ ನಿರ್ಧಾರ!

ಚಿಕ್ಕಬಳ್ಳಾಪುರ: ಮಹಾಮಳೆಗೆ ಯೋಧರ ನಾಡು ಕೊಡಗು ಅಕ್ಷರಶಃ ನಲುಗಿ ಹೋಗಿದ್ದು, ಜನ ಪಡಬಾರದ ಪಡಿಪಾಟಲು ಪಡುತ್ತಿದ್ದರೆ, ಇತ್ತ ರಾಜ್ಯದ ನಾನಾ ಮೂಲೆಗಳಿಂದಲೂ ನಿರೀಕ್ಷೆಗೂ ಮೀರಿ ಜನ ಕೊಡಗಿನ ಸಂತ್ರಸ್ತರ ಸಂಕಷ್ಟಕ್ಕೆ ನಾನಾ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹೀಗೆ ಕಾಫಿಶಾಪ್ ಮಾಲೀಕರೊಬ್ಬರು ತಮ್ಮ ಸಂಪೂರ್ಣ ವ್ಯಾಪಾರದ ಹಣ ನೀಡಲು ನಿರ್ಧರಿಸಿದ್ದಾರೆ.

ಕೆಲವರು ಬಟ್ಟೆ, ಬರೆ, ಆಹಾರ, ಔಷಧಿಗಳು ಸೇರಿದಂತೆ ಹಣಕಾಸಿನ ನೆರವು ಸಹ ನೀಡಿ ಸಹಾಯ ಹಸ್ತ ಚಾಚುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ವಿ.ಎಂ ಕಾಫಿವಾಲಾ ಶಾಪ್ ನ ಮಾಲೀಕ ಮುರುಳಿ ತಮ್ಮ ಇಡೀ ದಿನದ ವ್ಯಾಪಾರದ ಹಣವನ್ನು ಕೊಡಗಿನ ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಬಜಾರ್ ರಸ್ತೆಯಲ್ಲಿರುವ ವಿ.ಎಂ ಕಾಫಿವಾಲಾ ಶಾಪ್ ನಲ್ಲಿ ಕಾಫಿ, ಪಿಜ್ಜಾ, ಸ್ಯಾಂಡ್ ವಿಚ್, ಬರ್ಗರ್ ಸೇರಿದಂತೆ 30ಕ್ಕೂ ಹೆಚ್ಚು ತರಹೇವಾರಿ ಚೈನೀಸ್ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತೆ. ಹೀಗಾಗಿ ಪ್ರತಿದಿನ 6 ರಿಂದ 8 ಸಾವಿರ ರೂ. ಆಗುತ್ತದೆ.

ಆದರೆ ಭಾನುವಾರ ಮಾಮೂಲಿಗಿಂತ ಜಾಸ್ತಿ ಅಂದರೆ 10 ಸಾವಿರ ರೂ. ವ್ಯಾಪಾರ ಆಗಿದ್ದು, ಇಡೀ ದಿನದ ವ್ಯಾಪಾರದ ಹಣವನ್ನು ಮಡಿಕೇರಿಯ ಸಂತ್ರಸ್ತರ ನೆರವಿಗೆ ನೀಡಲು ಮಾಲೀಕ ಮುರುಳಿ ನಿರ್ಧರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *