ಗುಜರಾತ್‌ನಲ್ಲಿ 5,000 ಕೋಟಿ ಮೌಲ್ಯದ ಕೊಕೇನ್ ಸೀಜ್

– 2 ವಾರದಲ್ಲಿ ಒಟ್ಟು 13,000 ಕೋಟಿ ಮೌಲ್ಯದ ಕೊಕೇನ್ ಜಪ್ತಿ

ಗುಜರಾತ್: 5,000 ಕೋಟಿ ರೂ. ಮೌಲ್ಯದ 514 ಕೆ.ಜಿ ಕೊಕೇನ್ (Cocaine) ವಶಕ್ಕೆ ಪಡೆಯಲಾಗಿದ್ದು, ದೆಹಲಿ ಹಾಗೂ ಗುಜರಾತ್ ಪೊಲೀಸರ ವಿಶೇಷ ತಂಡವು ಭರ್ಜರಿ ಬೇಟೆಯಾಡಿ, ಐವರನ್ನು ಬಂಧಿಸಿದ್ದಾರೆ.

ಇತ್ತೀಚಿಗೆ ದೆಹಲಿ ಪೊಲೀಸರು 5,000 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಭಾನುವಾರ ಗುಜರಾತ್‌ನಲ್ಲಿ 5,000 ಕೋಟಿ ರೂ. ಮೂಲ್ಯದ 518 ಕೆ.ಜಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದೆ. ಗುಜರಾತ್ ಹಾಗೂ ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅಂಕಲೇಶ್ವರ ಔಷಧ ಕೇಂದ್ರದಲ್ಲಿ ಮಾದಕ ವಸ್ತು ಪತ್ತೆಯಾಗಿದೆ.ಇದನ್ನೂ ಓದಿ:ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

ಈ ಮೂಲಕ ಒಟ್ಟು 2 ವಾರದಲ್ಲಿ ಗುಜರಾತ್ ಹಾಗೂ ದೆಹಲಿಯಲ್ಲಿ ಜಾರಿ ನಿದೇಶನಾಯಲಯ (ED-Enforcement Directorate) ಒಟ್ಟು 13,000 ಕೋಟಿ ರೂ.ಮೌಲ್ಯದ 1289 ಕೆ.ಜಿ ಕೊಕೇನ್ ಹಾಗೂ 40 ಕೆ.ಜಿಯಷ್ಟು ಥಾಯ್ಲೆಂಡ್‌ನ ಹೈಡ್ರೋಪೋನಿಕ್ ಎಂಬ ಮಾದಕ ವಸುವನ್ನು ವಶಕ್ಕೆ ಪಡೆದುಕೊಂಡಿವೆ.

ಇದಕ್ಕೂ ಮುನ್ನವೇ ಅ.1 ರಂದು ದೆಹಲಿ ಪೊಲೀಸರ ವಿಶೇಷ ತಂಡವು ಮಹಿಪಾಲ್‌ಪುರದಲ್ಲಿರುವ ತುಷಾರ್ ಗೋಯಲ್ ಅವರ ಗೋದಾಮಿನ ಮೇಲೆ ದಾಳಿ ನಡೆಸಿತ್ತು. ಆ ವೇಳೆ 562 ಕೆ.ಜಿ. ಕೊಕೇನ್ ಮತ್ತು 40 ಕೆ.ಜಿ. ಹೈಡ್ರೋಪೋನಿಕ್ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಅದಾದ ಬಳಿಕ ಹಿಚ್ಚಿನ ತನಿಖೆಗಾಗಿ ಅ.11ರಂದು ದೆಹಲಿಯ ರಮೇಶ್ ನಗರದಲ್ಲಿ 208 ಕೆ.ಜಿ. ಕೊಕೇನ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ನಮಕೀನ್ ಪ್ಯಾಕೆಟ್‌ನಲ್ಲಿ ಮಾದಕವಸ್ತು ಲಭ್ಯವಾಗಿತ್ತು.

ಈ ಪ್ರಕರಣಗಳ ಬೆನ್ನಲ್ಲೇ ದೆಹಲಿ ಹಾಗೂ ಗುಜರಾತ್ ಪೊಲೀಸರ ವಿಶೇಷ ತಂಡವು ಭರ್ಜರಿ ದಾಳಿ ನಡೆಸಿದ್ದು, 5000 ಕೋಟಿ ರೂ. ಮೌಲ್ಯದ 514 ಕೆ.ಜಿ ಕೊಕೇನ್ ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – ಕೃತ್ಯದ ಬಳಿಕ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಗಳು