ತುಮಕೂರು, ಚಾಮರಾಜನಗರದಲ್ಲಿ ಕೆರೆ ಹಾವನ್ನು ನುಂಗಿದ ನಾಗ!

ತುಮಕೂರು/ಚಾಮರಾಜನಗರ: ನಾಗರಹಾವೊಂದು ಕೆರೆ ಹಾವನ್ನು ನುಂಗಿದ ಘಟನೆ ತುಮಕೂರಿನ ರಂಗಾಪುರದಲ್ಲಿ ನಡೆದಿದೆ.

ನಾಗರ ಹಾವೊಂದು ಕೆರೆ ಹಾವನ್ನು ಬೆನ್ನತ್ತಿದ್ದು, ಇದರಿಂದ ಬೆದರಿದ ಕೆರೆ ಹಾವು ಈರುಳ್ಳಿ ಅಂಗಡಿಗೆ ನುಗ್ಗಿದೆ. ಈ ವೇಳೆ ನಾಗರಹಾವು ಕೆರೆ ಹಾವನ್ನು ಸೆಣಸಿ ಅದನ್ನು ನುಂಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ರಕ್ಷಕ ದಿಲೀಪ್, ನಾಗರಹಾವನ್ನು ಹಿಡಿದು ನಾಮದ ಚಿಲುಮೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಕೆರೆ ಹಾವು ಹಾಗೂ ನಾಗರ ಹಾವನ್ನು ನೋಡಿ ಸ್ಥಳೀಯರು ಗಾಬರಿಗೊಂಡಿದ್ದರು.

ಇತ್ತ ಚಾಮರಾಜನಗರ ಸಮೀಪ ತಾಳವಾಡಿಯ ಕಲ್ಮಂಡಿಪುರದಲ್ಲೂ ಕೂಡ ನಾಗರಹಾವೊಂದು ಕೆರೆ ಹಾವನ್ನು ನುಂಗಿತ್ತು. ರಸ್ತೆ ಬದಿಯಲ್ಲಿ ಮಲಗಿದ್ದ ನಾಗರಹಾವು ಹಸಿವು ತಾಳಲಾರದೆ ಅಲ್ಲಿಯೇ ಇದ್ದ ಕೆರೆ ಹಾವನ್ನು ನುಂಗಿದೆ. ನಾಗರಹಾವು ಕೆರೆ ಹಾವನ್ನು ನುಂಗಲು ಸಾಕಷ್ಟು ಸಮಯ ತೆಗೆದು ಕೊಂಡಿದ್ದು ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಹಾವುಗಳು ಕಪ್ಪೆ ಅಥವಾ ಇಲಿಯನ್ನು ನುಂಗುವುದು ಸಾಮಾನ್ಯ. ಆದರೆ ಇಲ್ಲಿ ಹಾವು-ಹಾವನ್ನೇ ನುಂಗಿರುವುದು ಆಶ್ಚರ್ಯ ಮೂಡಿಸಿದೆ.

https://www.youtube.com/watch?v=O52eQlt43G0

Comments

Leave a Reply

Your email address will not be published. Required fields are marked *