ವಿಜಯಪುರ: ಅಮಾವಾಸ್ಯೆಯ ದಿನ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನ್ನಾಳ ಗ್ರಾಮದಲ್ಲಿ ನಡೆದಿದೆ.
ಮಲ್ಲಪ್ಪ ಹೂಗಾರ ಎಂಬವರ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದ್ದು, ಮನೆಯ ದೇವರ ಜಗಲಿಯ ಮೇಲೆ ನಾಗರ ಹಾವು ಬಂದು ಕೂತಿದೆ. ಇದರಿಂದ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿದ್ದು, ನಾಗರ ಅಮಾವಾಸ್ಯೆಯಾದ ಕಾರಣ ನಾಗರಾಜನ ದರ್ಶನಕ್ಕೆ ಗ್ರಾಮದ ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಹಾಡು ದೇವರ ಕೋಣೆಯಲ್ಲಿ ಪ್ರತ್ಯೇಕ್ಷವಾಗಿರುವುದನ್ನು ಕಂಡ ಮನೆಯ ಮಾಲೀಕರು ಹಾವಿಗೆ ಪೂಜೆ ನಡೆಸಿದ್ದಾರೆ. ಎಷ್ಟೇ ಶಬ್ಧ ಮಾಡಿದರು ನಾಗರಹಾವು ಎಲ್ಲಿಗೂ ತೆರಳದ್ದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾಗರ ಅಮಾವಾಸ್ಯೆ ದಿನದಂದೇ ಮನೆಯಲ್ಲಿ ಹಾವು ಕಾಣಿಸಿಕೊಂಡಿರುವುದು ಶುಭ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಜನ ಮರುಳೊ ಜಾತ್ರೆ ಮರುಳೊ ಎಂಬಾಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply