ತನ್ನನ್ನು ರಕ್ಷಿಸಿದ ಉರಗ ತಜ್ಞನನ್ನೇ ಕಚ್ಚಿದ ನಾಗರಹಾವು- ವಿಡಿಯೋ ನೋಡಿ

ಚಿಕ್ಕಬಳ್ಳಾಪುರ: ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಿದ ಉರಗ ತಜ್ಞನನ್ನು ಅದೇ ಹಾವು ಕಚ್ಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮದ ಬಳಿ ನಡೆದಿದೆ.

ಪೃಥ್ವಿರಾಜ್ ಹಾವಿನಿಂದ ಕಚ್ಚಿಸಿಕೊಂಡ ಉರಗತಜ್ಞ. ಹಾರೋಬಂಡೆ ಗ್ರಾಮದ ರೈತ ನರೇಂದ್ರಬಾಬು ಎಂಬವರ ದ್ರಾಕ್ಷಿ ತೋಟದಲ್ಲಿನ ಬಲೆಗೆ ನಾಗರಾಹಾವು ಸಿಕ್ಕಿ ಹಾಕಿಕೊಂಡಿತ್ತು. ಬಲೆಯಲ್ಲಿ ಹಾವು ಸಾವು ಬದುಕಿನ ನಡುವೆ ವಿಲ ವಿಲ ಒದ್ದಾಡುತ್ತಿತ್ತು. ಈ ವೇಳೆ ಪೃಥ್ವಿರಾಜ್ ಹಾವಿನ ರಕ್ಷಣೆಗೆ ಮುಂದಾಗಿದ್ದರು.

ಪೃಥ್ವಿರಾಜ್ ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ದ್ರಾಕ್ಷಿ ಬಲೆಯಿಂದ ನಾಗರಹಾವನ್ನ ಬೇರ್ಪಡಿಸಿ ಹಾವನ್ನ ರಕ್ಷಿಸಿದ್ರು. ಕೊನೆಗೆ ಹಾವನ್ನು ಬಿಡುವ ವೇಳೆ ಪೃಥ್ವಿರಾಜ್ ಅವರಿಗೆ ಹಾವು ಕಚ್ಚಿದೆ. ಇದೂವರೆಗೂ ಮೂರು ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಹಾವಿನಿಂದ ಕಚ್ಚಿಸಿಕೊಂಡ ಪೃಥ್ವಿರಾಜ್‍ರನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

https://youtu.be/L85E8z1iMno

Comments

Leave a Reply

Your email address will not be published. Required fields are marked *