ಸರ್ಕಾರವನ್ನು ಅಸ್ಥಿರಗೊಳಿಸುವ ಸಿಎಂ ಹೇಳಿಕೆ ಸರಿಯಾಗಿದೆ: ದಿನೇಶ್ ಗುಂಡೂರಾವ್

ಶಿವಮೊಗ್ಗ: ಕಾಂಗ್ರೆಸ್ ಪ್ರಚೋದನಾ ರಾಜಕೀಯ ಮಾಡುತ್ತಿಲ್ಲ, ಅಭಿವೃದ್ಧಿಯ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಮಾತನಾಡಿದ ಅವರು ಸಮನ್ವಯ ಸಮಿತಿ ಸದಸ್ಯರು ಯಾರಾಗಬೇಕು ಎಂಬುದು ಚರ್ಚಾಸ್ಪದ ವಿಷಯವಲ್ಲ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇಂದಿಗೂ ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ. ಸಿಎಂ ಹೇಳಿಕೆ ಸರಿಯಾಗಿಯೇ ಇದ್ದು, ಬಿಜೆಪಿ ಈ ಕೆಲಸ ಮಾಡುತ್ತಿದೆ. ಈ ಪ್ರಯತ್ನವನ್ನು ಬಿಟ್ಟು ಉತ್ತಮ ಪ್ರತಿಪಕ್ಷವಾಗಿ ಕೆಲಸ ಮಾಡುವುದನ್ನು ಬಿಜೆಪಿ ಕಲಿಯಬೇಕು ಎಂದರು.

ಯಡಿಯೂರಪ್ಪ ಜನಪರ ಹೋರಾಟ ಮಾಡಿಲ್ಲ. ಲೋಕಸಭೆಯಲ್ಲಿ ರಾಜ್ಯದ ಪರವಾಗಿ ಮಾತನಾಡಿಲ್ಲ. ಯಡಿಯೂರಪ್ಪ ಹಾಗೂ ಬಿಜೆಪಿ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿವೆ ಎಂದು ಟೀಕಿಸಿದರು.

ಸಮನ್ವಯ ಸಮಿತಿ ಶೀಘ್ರವೇ ಸಭೆ ಸೇರಲಿದ್ದು, ರೈತರ ಸಾಲ ಮನ್ನಾ ಬಿಟ್ಟು ಬೇರೆ ಯಾವುದೇ ಪ್ರಮುಖ ನಿರ್ಧಾರವನ್ನು ಸಿಎಂ ಕೈಗೊಂಡಿಲ್ಲ. ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ಅಭಿನಂದನೆ ಸಲ್ಲಿಸಬೇಕು. ಈ ತನಿಖೆಯಿಂದ ಹತ್ಯೆ ಹಿಂದೆ ಇರುವವರು ಯಾರು ಎಂಬುದು ಬೆಳಕಿಗೆ ಬಂದಿದೆ. ಬಿಜೆಪಿ ಆರ್‍ಎಸ್‍ಎಸ್ ದೇಶವನ್ನು ತಪ್ಪು ಹಾದಿಗೆ ತೆಗೆದುಕೊಂಡು ಹೋಗುತ್ತಿದೆ. ದೇಶದ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಪ್ರಧಾನ ಮಂತ್ರಿ ಮನ್ ಕೀ ಬಾತ್ ನಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುತ್ತಿಲ್ಲ ಎಂದು ದೂಷಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *