ಜನರ ಉದ್ದಾರ ಮಾಡುತ್ತೇವೆ ಅಂತ ಸ್ವಯಂ ಉದ್ಧಾರ ಆದ ಸಾವಿರಾರು ಉದಾಹರಣೆಗಳಿವೆ: ಬೊಮ್ಮಾಯಿ

ಚಿಕ್ಕಬಳ್ಳಾಪುರ: ಜನರ ಉದ್ಧಾತ ಮಾಡುತ್ತೇವೆ ಅಂತ ಸ್ವಯಂ ಉದ್ಧಾರ ಆದ ಸಾವಿರಾರು ಉದಾಹರಣೆಗಳಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಟೀಕಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಜಾಗೃತರಾದಾಗಲೇ ಬದಲಾವಣೆ ಆಗಲಿದೆ. ಪ್ರಧಾನಿ ಮೋದಿಯವರು ಜನರಿಗೆ ತಮ್ಮ ಹಕ್ಕುಗಳ ಪಡೆಯುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಕೆಲ ಕಾಂಗ್ರೆಸ್ ನಾಯಕರು ರೈತರ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

ರವೀಂದ್ರನಾಥ್ ಠಾಕೂರ್ ಹೇಳಿದ್ದರು. ದೇವರು ಎಲ್ಲಿದ್ದಾನೆ ಅಂದರೆ ಕಾರ್ಮಿಕನ ಶ್ರಮ ರೈತರ ಬೆವರಿನಲ್ಲಿದೇ ಅಂತ. ಅವರ ಮಾತಿನಂತೆ ನಮ್ಮ ಧ್ಯೇಯ ಆ ರೈತರ ಬೆವರಿಗೆ ಶಕ್ತಿ ಸಿಗಬೇಕು ಅನ್ನುವ ಸಂಕಲ್ಪ ತೊಟ್ಟಿದ್ದೇವೆ. ನಾನು ಅಧಿಕಾರ ವಹಿಸಿದ ಮೂರು ಗಂಟೆಯ ಒಳಗೆ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದೆ. ವಯಸ್ಸಾದ ತಂದೆ-ತಾಯಿಯ ಬಡವರ ನಿರ್ಗತಿಕರ ಮಾಶಾಸನ ಹೆಚ್ಚಳ ಮಾಡಿದೆ. ಬಡವರ ಕಳಕಳಿ ಇದ್ದವರಿಗೆ ಮಾತ್ರ ಈ ಕಾಳಜಿ ಬರುತ್ತದೆ. ಇದು ಬಡವರ ಸರ್ಕಾರವೋ ಅಲ್ಲವೋ ನೀವೇ ತೀರ್ಮಾನ ಮಾಡಿ ಎಂದರು. ಇದನ್ನೂ ಓದಿ: ನನಗೂ ನನ್ನ ಪುತ್ರನಿಗೂ ಬಿಜೆಪಿಯಿಂದ ಟಿಕೆಟ್‌ ಆಫರ್‌ ಬಂದಿದೆ: ಜಿಟಿಡಿ

ರೈತರು ಮಕ್ಕಳು ವಿದ್ಯಾವಂತರಾಗಬೇಕು ಆರ್ಥಿಕವಾಗಿ ಸಬಲರಾಗಬೇಕು. ಈ ಹಿಂದೆ ಇದ್ದ ಸರ್ಕಾರಗಳು ಗರೀಬಿ ಹಠಾವೋ ಅಂತ ಬರೀ ಬಾಯಿ ಮಾತಲ್ಲಿ ಹೇಳುತ್ತಿದ್ದರು. ಎಷ್ಟು ವರ್ಷ ಅದು? ರೈತರ ಬಗ್ಗೆ ಯಾಕೆ ಚಿಂತನೆ ಮಾಡಲಿಲ್ಲ? ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಕಾಂಗ್ರೆಸ್‍ನವರು ಮಾತನಾಡುತ್ತಿದ್ದಾರೆ. ಆದರೆ ನಾವು ಬಜೆಟ್‍ನಲ್ಲಿ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಅವರಿಗೂ ನಮಗೂ ಇರುವ ವ್ಯತ್ಯಾಸ ಎಂದು ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *