ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿ – ಕೇಜ್ರಿವಾಲ್‍ಗೆ ಸ್ಟಾಲಿನ್ ಪತ್ರ

ನವದೆಹಲಿ: ಈ ಬಾರಿಯ ದೀಪಾವಳಿ ಹಬ್ಬಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಪಟಾಕಿ (Firecracker) ಮಾರಾಟ ಮಾಡಲು ಅನುಮತಿ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಅವರು ಪತ್ರ ಬರೆದಿದ್ದಾರೆ.

ತಮಿಳುನಾಡಿನ ಶಿವಕಾಶಿಗೆ (Sivakasi) ಶೇ.70ರಷ್ಟು ವಾರ್ಷಿಕ ಆದಾಯ ದೀಪಾವಳಿ (Diwali) ಹಬ್ಬದ ಸಂದರ್ಭದಲ್ಲಿ ಮಾರಾಟವಾಗುವ ಪಟಾಕಿಯಿಂದ ಬರುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿರುವ ಶಿವಕಾಶಿ ನಗರವು ಭಾರತದಲ್ಲಿರುವ ಪಟಾಕಿ ತಯಾರಕರ ಕೇಂದ್ರವಾಗಿದೆ ಮತ್ತು 6.5 ಲಕ್ಷ ಕುಟುಂಬಗಳು ನೇರವಾಗಿ ಮತ್ತು ಪರೋಕ್ಷವಾಗಿ ಈ ಉದ್ಯೋಗವನ್ನೇ ತಮ್ಮ ಜೀವನೋಪಾಯವಾಗಿ ಅವಲಂಬಿಸಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಶುರುವಾಯ್ತು ಭೂಕಂಪನದ ಗುಮ್ಮ – ಬೆಚ್ಚಿಬಿದ್ದ ಜನತೆ

ಈ ನಡುವೆ ದೆಹಲಿ ಸರ್ಕಾರವು ಸೆಪ್ಟೆಂಬರ್ 7 ರಿಂದಲೇ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಪಟಾಕಿ ಮೇಲಿನ ಈ ನಿಷೇಧವು 2023ರ ಜನವರಿ 1ರವರೆಗೂ ಇರಲಿದೆ. ಇದನ್ನೂ ಓದಿ: ಬಿಜೆಪಿಯವರಿಗೆ ನನ್ನ ಕಂಡರೆ ಭಯ; ಶತ್ರುಗಳಿದ್ದಷ್ಟು ನಾವು ಹೆಚ್ಚು ಬಲಶಾಲಿಗಳಾಗ್ತೀವಿ – ಸಿದ್ದು

ಈ ಎಲ್ಲದರ ಮಧ್ಯೆ ವಿಶೇಷವೆಂದರೆ ಅಕ್ಟೋಬರ್ 10 ರಂದು ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಪಟಾಕಿ ನಿಷೇಧವನ್ನು ಕೈಬಿಡಲು ನಿರಾಕರಿಸಿತು. ನಾವು ದೆಹಲಿಯಲ್ಲಿ ಪಟಾಕಿಗಳ ಮೇಲಿನ ನಿಷೇಧವನ್ನು ತೆಗೆದುಹಾಕುವುದಿಲ್ಲ. ನಮ್ಮ ಆದೇಶ ಅತ್ಯಂತ ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *