ಮಾಧ್ಯಮಗಳ ಮೇಲೆ ಸಿಎಂ ಸಿದ್ದರಾಮಯ್ಯ ದಬ್ಬಾಳಿಕೆ!

ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್, ಶಾಸಕ ಭೈರತಿ ಬಸವರಾಜ್ ಆಪ್ತ ಪೆಟ್ರೋಲ್ ನಾರಾಯಣ ದಬ್ಬಾಳಿಕೆ ಮಾಡಿದ್ದು ಆಯ್ತು, ಈಗ ಸಿಎಂ ಸಿದ್ದರಾಮಯ್ಯನವರ ಗನ್ ಮ್ಯಾನ್ ಪತ್ರಕರ್ತರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ.

ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದ ವಿಚಾರವನ್ನು ಪ್ರಸ್ತಾಪಿಸಿ ವಿಧಾನಸೌಧದಲ್ಲಿ ಪತ್ರಕರ್ತರೊಬ್ಬರು ಬೆಳಗ್ಗೆ ಸಿದ್ದರಾಮಯ್ಯನವರಿಗೆ ಪ್ರಶ್ನೆ ಕೇಳಲು ಮುಂದಾಗುತ್ತಿದ್ದರು. ಈ ಸಂದರ್ಭದಲ್ಲಿ ಸಿಎಂ ಅವರ ಗನ್ ಮ್ಯಾನ್ ಸಿಟ್ಟಾಗಿ ಪತ್ರಕರ್ತರನ್ನು ತಳ್ಳಿದ್ದಾರೆ.

ನೆಲಕ್ಕೆ ಬಿದ್ದರೂ ಸೌಜನ್ಯಕ್ಕೂ ಪತ್ರಕರ್ತರನ್ನು ಸಿಎಂ ಸಿದ್ದರಾಮಯ್ಯ ನೋಡದೇ, ಇಂತವರನ್ನು ತಳ್ಳದೇ ಇನ್ನೇನು ಮಾಡಲು ಆಗುತ್ತದೆ ಬಿಡ್ರಯ್ಯ ಎಂದು ಗನ್ ಮ್ಯಾನ್‍ಗೆ ಹೇಳಿ ಮುಂದಕ್ಕೆ ಹೋಗಿದ್ದಾರೆ.

https://youtu.be/f9xXUWTwDy4

 

Comments

Leave a Reply

Your email address will not be published. Required fields are marked *