ಬಿಜೆಪಿ, ಆರ್ ಎಸ್ಎಸ್‍ನಲ್ಲೂ ಉಗ್ರರಿದ್ದಾರೆ: ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಬಿಜೆಪಿ, ಬಜರಂಗದಳ ಹಾಗೂ ಆರ್ ಎಸ್‍ಎಸ್ ನಲ್ಲೂ ಉಗ್ರಗಾಮಿಗಳಿದ್ದಾರೆ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ನಾಗವಳ್ಳಿಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮಾಜದ ಶಾಂತಿ ಕದಡುವ ಆರ್ ಎಸ್‍ಎಸ್ ಆಗಲಿ, ಪಿಎಫ್ ಐ ಆಗಲಿ ಯಾವುದೇ ಸಂಘಟನೆಯಾದ್ರೂ ನಾವು ಕ್ರಮ ತೆಗೆದುಗೊಳ್ಳುತ್ತೇವೆ. ಕೋಮುವಾದ ಸಂಘಟನೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು.

ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಪಿಎಫ್‍ಐ ನಂಟಿ ಇದೆ ಎನ್ನುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ರವಿ ಪೂಜಾರಿಯಿಂದ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ತನ್ವೀರ್ ಸೇಠ್‍ ರಲ್ಲಿ  ನಾನು ಈ ಬಗ್ಗೆ ಕೇಳುತ್ತೇನೆ. ಪೊಲೀಸ್ ಅವರಿಗೂ ಈ ಬಗ್ಗೆ ಹೇಳುತ್ತೇನೆ ಎಂದರು.

ಕೊಡಗಿನಲ್ಲಿ ಎಂ.ಸಿ.ನಾಣಯ್ಯ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ನಾಣಯ್ಯ ಸ್ನೇಹಿತರು, ತುಂಬಾ ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ಅವರಿಗೆ ಆರೋಗ್ಯ ಸರಿ ಇಲ್ಲ. ನಾಣಯ್ಯಗೆ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಅವರನ್ನು ಭೇಟಿ ಮಾಡಿದ್ದೇನೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.  ಇದನ್ನೂ ಓದಿ: ಜೆಡಿಎಸ್ ಮುಖಂಡ ಎಂಸಿ ನಾಣಯ್ಯ ಕಾಂಗ್ರೆಸ್ ಸೇರ್ತಾರಾ? – ಸಿಎಂ ಭೇಟಿ ವೇಳೆ ಆಗಿದ್ದೇನು?

https://youtu.be/Im3_eBMtbeY

 

Comments

Leave a Reply

Your email address will not be published. Required fields are marked *