ಡಿಕೆಶಿಗೆ ಹುಟ್ಟುಹಬ್ಬದ ಸಂಭ್ರಮ – ಶುಭ ಕೋರಿದ ಸಿಎಂ

ಬೆಂಗಳೂರು: ಇಂದು 62ನೇ ಹುಟ್ಟುಹಬ್ಬವನ್ನು (Birth Day) ಆಚರಿಸಿಕೊಳ್ಳುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಶುಭ ಹಾರೈಸಿದರು.

ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರು ಡಿಕೆಶಿ ಹೆಗಲ ಮೇಲೆ ಕೈ ಹಾಕಿರುವ ಫೋಟೋವನ್ನು ಅಪ್ಲೋಡ್‌ ಮಾಡಿ ಶುಭಾಶಯ ತಿಳಿಸಿದರು.  ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಸಹೋದರಿಯರ ಮುಂದೆಯೇ ಯುವತಿಯ ಭೀಕರ ಹತ್ಯೆ – ಸಹಪಾಠಿಯಿಂದಲೇ ಕೃತ್ಯ

ಪೋಸ್ಟ್‌ನಲ್ಲಿ ಏನಿದೆ?
ನನ್ನ ಆತ್ಮೀಯ ಸ್ನೇಹಿತ ಮತ್ತು ಸಹೋದ್ಯೋಗಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಸಮರ್ಪಣೆ,  ಕೌಶಲ್ಯಗಳು ಮತ್ತು ನಮ್ಮ ಅಚಲವಾದ ಬದ್ಧತೆ ಯಾವಾಗಲೂ ಎದ್ದು ಕಾಣುತ್ತದೆ.

ನೀವು ಅದೇ ಉತ್ಸಾಹ ಮತ್ತು ಶಕ್ತಿಯೊಂದಿಗೆ ಮುನ್ನಡೆಸುವುದನ್ನು ಮುಂದುವರಿಸಲಿ. ನಿಮಗೆ ಯಶಸ್ಸು ಮತ್ತು ಸಂತೋಷದಿಂದ ತುಂಬಿದ ವರ್ಷವನ್ನು ಹಾರೈಸುತ್ತೇನೆ.