ತುಮಕೂರು: ಟಿಪ್ಪು ಜಯಂತಿ ಮಾಡಲು ಹೊರಟ ರಾಜ್ಯ ಸರ್ಕಾರದ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ `ಟಿಪ್ಪುವಿನ ನೈಜ ಸ್ವರೂಪ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡದ್ರೋಹಿ ಟಿಪ್ಪು ಜಯಂತಿ ಆಚರಿಸಲು ಹೊರಟ ಸಿಎಂ ಸಿದ್ದರಾಮಯ್ಯ ಅಧಿಕಾರ ಸುಟ್ಟುಕೊಳ್ಳುವುದು ನಿಶ್ಚಿತ ಎಂದರು.

ಟಿಪ್ಪು ಕುರಿತ ಧಾರವಾಹಿ ಮಾಡಲು ಹೋಗಿ ಸಂಜಯ್ ಖಾನ್ ಮೈ ಸುಟ್ಟುಕೊಂಡಿದ್ದಾರೆ. ಟಿಪ್ಪು ಖಡ್ಗ ಖರೀದಿಸಿ ಮಲ್ಯರ ಬುಸ್ಯಿನೆಸ್ ಬಿದ್ದು ಹೋಗಿದೆ. ಅದೇ ರೀತಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅಧಿಕಾರ ಸುಟ್ಟುಕೊಳ್ಳುವುದು ಗ್ಯಾರಂಟಿ ಎಂದು ಹೇಳಿದ್ರು.
ಮೈಸೂರು ರಾಜ್ಯಕ್ಕೆ ಕೊಡುಗೆ ಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಆಚರಿಸುವ ಬದಲು ಮೈಸೂರು ಅರಸರ ಯದುವಂಶ ನಿರ್ವಂಶ ಮಾಡಲು ಹೊರಟ ನಾಡ ದ್ರೋಹಿ ಟಿಪ್ಪುವಿನ ಜಯಂತಿ ಆಚರಿಸುತ್ತಿರುವುದು ದುರಂತ ಸಂಗತಿ ಅಂತ ಹೇಳಿದ್ರು.
ಟಿಪ್ಪು ಜಯಂತಿಗೆ ಏಕೆ ವಿರೋಧ?
ತುಮಕೂರಿನಲ್ಲಿ ನಡೆದ ವಿಚಾರ ಮಂಥನದಲ್ಲಿ ಮಾತನಾಡಿದ ಸಂದರ್ಭ. pic.twitter.com/Ux6lemq9BD— Prathap Simha (@mepratap) October 31, 2017
ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹಾಗೂ ಕಿರಿಯ ಶ್ರೀ ಗಳ ಆಶೀರ್ವಾದ ಪಡೆದೆ. pic.twitter.com/rqYujxuSRc
— Prathap Simha (@mepratap) October 31, 2017












Leave a Reply