ಕಲಬುರಗಿ: ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿಯೇ ಕಟ್ಟಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ಸಂಜೆ ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದ ಮುಂಬಾಗದಲ್ಲಿ ನಡೆದ ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಗೆ ಸಿದ್ದರಾಮಯ್ಯ ಅವರು ಬಂದಿದ್ದರು.
ಈ ವೇಳೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ವೇದಿಕೆ ಏರುತ್ತಿರುವಾಗ ಸೊಂಟದಿಂದ ಪಂಚೆ ಕಳಚುತ್ತಿರುವ ಅನುಭವಕ್ಕೆ ಬಂದಿದೆ. ತಕ್ಷಣ ಸಿದ್ದರಾಮಯ್ಯ ತಡವರಿಸಿಕೊಂಡು ಸೊಂಟಕ್ಕೆ ಕೈ ಹಾಕಿ ವೇದಿಕೆಯಲ್ಲೇ ಪಂಚೆ ಕಟ್ಟಿಕೊಂಡಿದ್ದಾರೆ.
ಕಾರ್ಯಕರ್ತರು ಸಿದ್ದರಾಮಯ್ಯ ಪಂಚೆ ಕಟ್ಟಿಕೊಳ್ಳುತ್ತಿದ್ದಾಗಲೇ ಹಾರ ಹಾಕಿ ಸನ್ಮಾನಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ಪಂಚೆ ಕಟ್ಟಿಕೊಳ್ಳುವುದರಲ್ಲಿ ಮಗ್ನವಾಗಿದ್ದರು.
https://www.youtube.com/watch?v=Ddpn4PiE4SI

Leave a Reply