ಸಚಿವ ಅನಂತ್ ಕುಮಾರ್ ಹೆಗ್ಡೆ ಬಾಯಲ್ಲಿ ಚರಂಡಿ ನೀರು ಹರಿಯುತ್ತಿದೆ- ಸಿಎಂ ವಾಗ್ದಾಳಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರನ್ನು ಟೀಕಿಸುವ ಭರದಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜ ಕ್ಷೇತ್ರದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಂತ್‍ಕುಮಾರ್ ಹೆಗ್ಡೆ ಬಾಯಲ್ಲಿ ಕಲಗಚ್ಚು ಇದೆ. ಆತನ ನಾಲಿಗೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಆ ಮೋದಿ ಮುಧೋಳ ನಾಯಿಂದ ಕಾಂಗ್ರೆಸ್ ನಿಯತ್ತು ಕಲಿಬೇಕು ಅಂತಾನೆ. ಅವನಿಗೇ ನಿಯತ್ತಿಲ್ಲ ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ. ಇವರೆಲ್ಲ ಕಾಂಗ್ರೆಸ್‍ಗೆ ಪಾಠ ಹೇಳ್ತಿದ್ದಾರೆ. ಇವರಿಬ್ಬರನ್ನ ಏನು ಮಾಡ್ಬೇಕು ಹೇಳಿ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ನಾಯಿ ಅಲ್ಲ, ಜನ ಮತ ಹಾಕೋದು- ಪ್ರಧಾನಿ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ

ಇತ್ತೀಚೆಗಷ್ಟೇ ಮುಧೋಳ ನಾಯಿಯನ್ನು ನೋಡಿ ಕಾಂಗ್ರೆಸ್ ನವರು ಕಲೀಬೇಕು ಅಂತ ಮೋದಿ ಹೇಳಿಕೆಗೆ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಕಿಡಿಕಾರಿದ್ದರು. ಮತ ಹಾಕಲು ನಾಯಿಗಳು ಬರಲ್ಲ. ಮನಷ್ಯರು ಬರೋದು ಅಂತ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಭಾರತೀಯ ಸೇನೆಗೆ ರಾಜ್ಯದ ಮುಧೋಳ ಸೇರ್ಪಡೆ: ವಿಶೇಷತೆ ಏನು? ಬೇರೆ ನಾಯಿಗಳಿಗಿಂತ ಭಿನ್ನ ಹೇಗೆ?

Comments

Leave a Reply

Your email address will not be published. Required fields are marked *