ಡಿಕೆಶಿಗೂ ಶಾಕ್, ಪವರ್ ಶೇರ್ ಕುತೂಹಲಿಗಳಿಗೂ ಶಾಕ್ – ಸಿಎಂ ಡಿನ್ನರ್‌ ಸಭೆ ಇನ್‌ಸೈಡ್‌ ಸ್ಟೋರಿ

ಬೆಂಗಳೂರು: ಕಾಂಗ್ರೆಸ್‌ ಆಪ್ತರ ಜೊತೆಗಿನ ಡಿನ್ನರ್‌ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರ ಹಂಚಿಕೆಯ ವಿಚಾರದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

ಹೌದು. ಕಾಂಗ್ರೆಸ್‌ ಹೈಕಮಾಂಡ್ (Congress High Command) ಮುಂದೆ ಪವರ್ ಶೇರ್ ಒಪ್ಪಂದ ಆಗಿಲ್ಲ. ಸಿಎಂ ಆಯ್ಕೆ ವೇಳೆ ಇಷ್ಟು ವರ್ಷ ಎಂಬ ಯಾವುದೇ ಒಪ್ಪಂದ ನಡೆದಿಲ್ಲ ಎಂಬ ವಿಚಾರವನ್ನು ಆಪ್ತರಿಗೆ ತಿಳಿಸಿದ್ದಾರೆ.

ಅವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಅಳೆದು ತೂಗಿ ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾವು ಹೇಳಿದಂತೆ ಕೇಳಿ ಅಂದಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂದಿದ್ದೇನೆ. ಆದ್ರೆ ಇಷ್ಟು ವರ್ಷ ಅಂತಾ ಯಾರೂ ಏನೂ ಹೇಳಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಈ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ: ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ

 

ಮಾಧ್ಯಮಗಳಲ್ಲಿ, ಕಾಂಗ್ರೆಸ್ ಒಳಗೆ ಪವರ್ ಶೇರ್ ಅಂತಾ ಮಾತಾಡ್ತಾರೆ. ಅದಕ್ಕೆ ನಾನು ಏನ್ ಮಾಡಲಿ. ದೆಹಲಿ ಚುನಾವಣೆಯಿದೆ. ಬಜೆಟ್ ಮುಂದೆ ಮಂಡಿಸಬೇಕಿದೆ. ಅದಕ್ಕೂ ಮೊದಲು ಪುನಾರಚನೆಗೆ ಅವಕಾಶ ಕೇಳುತ್ತೇನೆ. ಹೈಕಮಾಂಡ್ ಅವರು ಏನ್ ಮಾಡ್ತಾರೆ ನೋಡೋಣ ಎಂದಿದ್ದಾರೆ. ಸಿದ್ದರಾಮಯ್ಯನವರ ಈ ಮಾತು ಕೇಳಿ ಆಪ್ತರು ಸಂತೋಷ ಪಟ್ಟಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಡಿಕೆಶಿ ವಿದೇಶದಲ್ಲಿರುವಾಗಲೇ ಆಪ್ತ ಸಚಿವರೊಂದಿಗೆ ಸಿಎಂ ಡಿನ್ನರ್ ಮೀಟಿಂಗ್!

ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ವಿದೇಶ ಪ್ರವಾಸಕ್ಕೆ ತೆರಳಿದ ಸಮಯದಲ್ಲೇ ಸಿಎಂ ಆಪ್ತರ ಜೊತೆಗೆ ಸಭೆ ನಡೆಸಿದ್ದು ಅಲ್ಲದೇ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಚರ್ಚೆ ನಡೆಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.