ರಾಹುಲ್‌ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ

– ಉದ್ದೇಶ ಬೇರೆ ಆಗಿದ್ದರೂ ಹೇಳಿದ ರೀತಿ ತಪ್ಪು; ಸಿಎಲ್‌ಪಿ ಸಭೆಗೆ ಸಿಎಂ ಮಾಹಿತಿ

ಬೆಂಗಳೂರು: ರಾಹುಲ್ ಗಾಂಧಿ ಅವರ ನಿರ್ದೇಶನದ ಮೇಲೆ ರಾಜಣ್ಣರನ್ನ (KN Rajanna) ಸಂಪುಟದಿಂದ ಕೈ ಬಿಡಲಾಗಿದೆ ಶಾಸಕಾಂಗ ಪಕ್ಷದ ಸಭೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಮಾಹಿತಿ ನೀಡಿದ್ದಾರೆ.

ಸಭೆಯ ಆರಂಭದಲ್ಲೇ ಕೆ.ಎನ್‌ ರಾಜಣ್ಣ ತಲೆದಂಡ ಕುರಿತು ಮಾಹಿತಿ ನೀಡಿದ ಸಿಎಂ, ರಾಜಣ್ಣರನ್ನ ಸಚಿವ ಸಂಪುಟದಿಂದ ವಜಾ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಯ್ತು. ಅವರು ಮಾತನಾಡಿದ ಉದ್ದೇಶ ಬೇರೆಯೇ ಆಗಿದ್ದರೂ ಹೇಳಿದ ರೀತಿ ಸರಿ ಇರಲಿಲ್ಲ. ಆ ತಪ್ಪಿನಿಂದಾಗಿ ರಾಜಣ್ಣರನ್ನ ಸಂಪುಟದಿಂದ ಕೈ ಬಿಡಬೇಕಾಯಿತು. ರಾಹುಲ್ ಗಾಂಧಿ ಅವರ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ಕೈಬಿಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸೆಪ್ಟೆಂಬರ್‌ ಕ್ರಾಂತಿ ಎಂದಿದ್ದ ರಾಜಣ್ಣಗೆ ಆಗಸ್ಟ್‌ನಲ್ಲೇ ಕೇಡುಗಾಲ – ವಜಾಗೆ ಕಾರಣ ಏನು?

ರಾಜಣ್ಣ ತಲೆದಂಡ ಆಗಿದ್ದೇಕೆ?
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಹೇಳಿಕೆಗೆ ರಾಜಣ್ಣ ವ್ಯಂಗ್ಯಭರಿತ ಹೇಳಿಕೆ ಕೊಟ್ಟಿದ್ದರು. ನಮ್ಮ ಕಾಲದಲ್ಲೇ ಅಲ್ವಾ ವೋಟರ್ ಲಿಸ್ಟ್ ಆಗಿದ್ದು, ಆಗೇನು ಕಣ್ಣುಮುಚ್ಚಿ ಕುಳಿತಿದ್ರಾ? ಮಾತನಾಡಿದ್ರೆ ಏನೇನೋ ಆಗುತ್ತೆ. ಈಗ ದೂರಿದ್ರೆ ಏನರ್ಥ? ಎಂದು ಹೇಳಿಕೆ ಕೊಟ್ಟಿದ್ದರು. ಇದು ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿತ್ತು. ರಾಜಣ್ಣ ಲೂಸ್‌ ಟಾಕ್‌ ನೀಡುವುದು ಹೊಸದೆನಲ್ಲ. ಈ ಹಿಂದೆಯೂ ಹಲವು ಬಾರಿ ಸರ್ಕಾರ ಮತ್ತು ಸಚಿವರು, ಹೈಕಮಾಂಡ್‌ ನಾಯಕರ ವರ್ತನೆಯನ್ನು ಟೀಕಿಸಿದ್ದರು. ಈ ಸಂಬಂಧ ಹೈಕಮಾಂಡ್‌ ಹಂತಕ್ಕೆ ದೂರು ಹೋಗಿತ್ತು. ಇದನ್ನೂ ಓದಿ: ಸಂಪುಟದಿಂದ ರಾಜಣ್ಣ ಕಿಕ್‌ಔಟ್‌ – ಆಪ್ತನ ತಲೆದಂಡದಿಂದ ಮೌನಕ್ಕೆ ಶರಣಾದ ಸಿಎಂ

ಈ ಬಾರಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನದ ಆರೋಪ ಮಾಡಿದ್ದ ರಾಹುಲ್‌ ಗಾಂಧಿ, ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ. ಆದ್ರೆ ರಾಜಣ್ಣ ಅವರ ಹೇಳಿಕೆ ರಾಗಾ ಅವರ ಹೋರಾಟಕ್ಕೆ ಹಿನ್ನಡೆ ಉಂಟುಮಾಡುವಂತಿತ್ತು. ಆದ್ದರಿಂದ ರಾಜಣ್ಣರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡ ಹೈಕಮಾಂಡ್‌ ಯಾವುದೇ ಕಾರಣಕ್ಕೂ ಕ್ಷಮಿಸದದೇ ರಾಜಣ್ಣ ಅವರನ್ನ ಸಂಪುಟದಿಂದ ಕಿಕ್‌ಔಟ್‌ ಮಾಡಿಸಿದೆ. ಇದನ್ನೂ ಓದಿ: ರಾಜಣ್ಣ ರಾಜೀನಾಮೆ ಅಲ್ಲ, ಸಂಪುಟದಿಂದಲೇ ಕಿಕ್‌ಔಟ್‌