ಹೂಬ್ಲೋಟ್ ವಾಚ್ ಕಮಿಷನ್ ಆದ್ರೆ ಮೋದಿ ಸೂಟ್ ಏನು?- ಶಾ ಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ದಾವಣಗೆರೆ ರೈತ ಸಮಾವೇಶದಲ್ಲಿ ಮೋದಿ ಭಾಗವಹಿಸುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಿಎಂ ಸಿದ್ದರಾಮಯ್ಯ ಟ್ವೀಟ್ ವಾರ್ ಗೆ ಇಳಿದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ವಾಚ್ ಬಗ್ಗೆ ದಾಖಲೆ ನಿಮ್ಮ ಬಳಿ ಇದ್ರೆ ಬಿಡುಗಡೆ ಮಾಡಿ. ಆದ್ರೆ ಅದೇ ಲಾಜಿಕ್ ಪಿಎಂ ಅವರ ಸೂಟ್ ಗೂ ಕೂಡ ಅನ್ವಯ ಆಗಲ್ಲವೇ ಅಂತಾ ಪ್ರಶ್ನಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಮುಷ್ಠಿ ಅಕ್ಕಿಯೇ ಗತಿ. ನಾವು ಪ್ರತಿಯೊಬ್ಬರಿಗೂ 7 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಅನ್ನಭಾಗ್ಯ ವಿರೋಧಿಗಳ ಬಗ್ಗೆ ಎಚ್ಚರವಿರಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಟ್ಯಾಗ್ ಮಾಡಿ ಸಿಎಂ ಟಾಂಗ್ ಕೊಟ್ಟಿದ್ದಾರೆ.

ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇರಿದ 12 ಸಾವಿರ ಕೋಟಿ ರೂ. ಹಣದೊಂದಿಗೆ ಚೋಟಾ ಮೋದಿ(ನೀರವ್ ಮೋದಿ) ಓಡಿಹೋಗಿದ್ದಾನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 15ರೊಳಗೆ ಮಹದಾಯಿ ಸಮಸ್ಯೆ ಬಗೆಹರಿಸೋದಾಗಿ ಬಿಎಸ್ ಯಡಿಯೂರಪ್ಪ ಮಾತು ಕೋಟ್ಟು ವಿಫಲರಾಗಿದ್ದಾರೆ. ಪ್ರಧಾನಿ ಮಧ್ಯಪ್ರವೇಶಿಸಬಹುದಿತ್ತು. ಆದ್ರೆ ಆ ಇಚ್ಛೆ ಅವರಿಗಿಲ್ಲ. ಈಗ ಮತದಾರರನ್ನ ಬ್ಲಾಕ್‍ಮೇಲ್ ಮಾಡ್ತಿದ್ದಾರೆ. ನೀವು ಮತ ಹಾಕೋವರೆಗೆ ಸಮಸ್ಯೆ ಬಗೆಹರಿಸಲ್ಲ ಅಂತಿದ್ದಾರೆ ಎಂದು ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಅಮಿತ್ ಶಾ ಹೇಳಿಕೆ ನೀಡಿದ್ದರು.

Comments

Leave a Reply

Your email address will not be published. Required fields are marked *