ಬಹುಕೋಟಿ ವಂಚನೆಗೈದು ದೇಶ ತೊರೆದ ಉದ್ಯಮಿ ಜೊತೆ ನಂಟು: ಬಿಜೆಪಿಗೆ ಸಿಎಂ ತಿರುಗೇಟು

ಬೆಂಗಳೂರು: ಉದ್ಯಮಿ ವಿಜಯ್ ಈಶ್ವರನ್ ಜೊತೆ ಸಿದ್ದರಾಮಯ್ಯ ಅವರಿಗೆ ನಂಟಿದೆ ಎಂದು ಆರೋಪ ಮಾಡಿದ ಬಿಜೆಪಿಗೆ ಇಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ದಾಖಲೆಗಳನ್ನು ಬಿಡುಗಡೆಗೊಳಿಸಿ ಉದ್ಯಮಿ ವಿಜಯ್ ಈಶ್ವರನ್ ಜೊತೆ ಸಿದ್ದರಾಮಯ್ಯ ನಂಟು ಹೊಂದಿದ್ದಾರೆ ಎಂದು ಆರೋಪಿಸಿದ್ದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನ್ನ ಮೇಲೆ ಆರೋಪ ಹೊರಿಸಲು ಬಿಜೆಪಿ ಈ ಫೋಟೋವನ್ನು ಉಪಯೋಗಿಸಿದ್ದರೆ, ದಾವೋಸ್‍ನಲ್ಲಿ ನೀರವ್ ಮೋದಿ ಜೊತೆಯಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋವನ್ನು ತೋರಿಸಿ ನಾನು ಆರೋಪಿಸಬಹುದು ಎಂದು ಸಿಎಂ ಟ್ವೀಟ್ ಮಾಡಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಆರೋಪ ಏನು?
ಆಗಸ್ಟ್ 13, 2013ರಂದು ಸಿಎಂ ಚೀನಾಕ್ಕೆ ತೆರಳಿದ್ದ ವೇಳೆ ವಿಜಯ್ ಈಶ್ವರನ್‍ನನ್ನು ಭೇಟಿ ಮಾಡಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದರು. ಪ್ರಸ್ತುತ ಮಲೇಷ್ಯಾದಲ್ಲಿರುವ ವಿಜಯ್ ಈಶ್ವರನ್ ತಮಿಳುನಾಡಿನಲ್ಲಿ 35 ಸಾವಿರಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಡೆ ಎಫ್‍ಐಆರ್ ದಾಖಲಾಗಿದೆ.

ಚೆನ್ನೈ ಮತ್ತು ಮುಂಬೈ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದ ವಿಜಯ್ ಈಶ್ವರನ್ 2009ರಿಂದ ದೇಶವನ್ನು ತೊರೆದು ಪರಾರಿಯಾಗಿದ್ದನು. ಈ ವ್ಯಕ್ತಿಯನ್ನು ಭೇಟಿ ಮಾಡಿದ್ದು ಯಾಕೆ? ಈ ಭೇಟಿ ವೇಳೆ ಈಶ್ವರನ್ ಗಿಫ್ಟ್ ನೀಡಿದ್ದು, ಆ ಗಿಫ್ಟ್ ಹ್ಯುಬ್ಲೊಟ್ ವಾಚ್ ಇರಬಹುದಲ್ಲವೇ ಎಂದು ಬಿಜೆಪಿ ಪ್ರಶ್ನಿಸಿತ್ತು. ಇದನ್ನೂ ಓದಿ: ಬಹುಕೋಟಿ ವಂಚನೆಗೈದು ದೇಶ ತೊರೆದ ಉದ್ಯಮಿಯ ಜೊತೆಗೆ ಸಿಎಂ ನಂಟು!

Comments

Leave a Reply

Your email address will not be published. Required fields are marked *