ಬದಾಮಿಯಲ್ಲಿ ಶ್ರೀರಾಮುಲುಗೆ ಟಾಂಗ್ ಕೊಡಲು ಸಿಎಂ ಮಾಸ್ಟರ್ ಪ್ಲಾನ್

ಬಾಗಲಕೋಟೆ: ಮೊದಲ ಬಾರಿಗೆ ಉತ್ತರ ಕರ್ನಾಟಕದ ಬದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸಿಎಂ ಸಿದ್ದರಾಮಯ್ಯ ಹೇಗಾದ್ರೂ ಮಾಡಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಎದುರಾಳಿ ಬಿಜೆಪಿಯ ಶ್ರೀರಾಮುಲು ಅವರನ್ನು ಅಧಿಕ ಮತಗಳ ಅಂತರದಿಂದ ಸೋಲಿಸಲು ಸಹ ಸಿಎಂ ರಾಜ್ಯ ನಾಯಕರ ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಬದಾಮಿಯಲ್ಲೂ ಗೆಲುವು ಅಷ್ಟೊಂದು ಸುಲಭವಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ 30 ಸಾವಿರಕ್ಕೂ ಅಧಿಕ ನಾಯಕ ಸಮುದಾಯ ಮತಗಳಿರುವ ಕ್ಷೇತ್ರದ ಜವಾಬ್ದಾರಿಯನ್ನು ಸತೀಶ್ ಜಾರಕಿಹೊಳಿ ಅವರಿಗೆ ನೀಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ನಾಯಕರ ಮತಗಳು ಶ್ರೀರಾಮಲುಗೆ ಸಾಲಿಡ್ ಆಗಬಹುದು ಎನ್ನುವ ಕಾರಣದಿಂದ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾದ ಸತೀಶ್ ಜಾರಕಿಹೊಳಿಗೆ ಕ್ಷೇತ್ರ ಜವಾಬ್ದಾರಿ ನೀಡುವ ಮೂಲಕ ತಿರುಗೇಟು ಕೊಡಲು ಸಿಎಂ ಪ್ಲಾನ್ ಮಾಡಿದ್ದಾರೆ. ಕುರುಬ ಮತ್ತು ನಾಯಕರ ಮತಗಳು ಹೆಚ್ಚು ಪಡೆದ್ರೆ ಗೆಲುವು ಸುಲುಭವಾಗಬಹುದು ಎಂಬುವುದು ಸಿಎಂ ಲೆಕ್ಕಾಚಾರ ಎನ್ನಲಾಗಿದೆ. ಈ ಸಂಬಂಧ ಮಂಗಳವಾರ ರಾತ್ರಿ ಬದಾಮಿ ಪಟ್ಟಣದ ಹೊರವಲಯದಲ್ಲಿರುವ ಕೃಷ್ಣ ಹೆರಿಟೇಜ್‍ನಲ್ಲಿ ಸತೀಶ್ ಜಾರಕಿಹೊಳಿ ಜೊತೆ ಸಿಎಂ ಮಾತುಕತೆ ಮಾಡಿದ್ದಾರೆ.

ಸಿಎಂ ಪ್ಲಸ್, ಮೈನಸ್ ಏನು?
ಬಾದಾಮಿಯಲ್ಲಿ ಕುರುಬ ಸಮುದಾಯದ 46 ಸಾವಿರ ಮತದಾರರು ಇದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಸಹಾಯ ಆಗಬಹುದು. ಸಿದ್ದರಾಮಯ್ಯ ಕಾಂಗ್ರೆಸ್‍ನ ನೇತೃತ್ವ ವಹಿಸಿ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವುದು.

ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಕೂಡ ನಿರ್ಣಾಯಕವಾಗಿವೆ. ಕಾಂಗ್ರೆಸ್‍ನಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಆಂತರಿಕ ಕಲಹ. ಬದಾಮಿ ಸ್ಪರ್ಧೆ ಬಗ್ಗೆ ಕಡೆ ಕ್ಷಣದವರೆಗೂ ಗೊಂದಲ ಸೃಷ್ಟಿಯಾಗಿದ್ದು ಸ್ವಲ್ಪ ಹಿನ್ನಡೆಯಾಗಬಹುದು.

ಶ್ರೀರಾಮುಲು ಪ್ಲಸ್, ಮೈನಸ್ ಏನು?
ವಾಲ್ಮೀಕಿ ಸಮುದಾಯದ 13 ಸಾವಿರ ಮತಗಳು, ಎಸ್ ಟಿ ಸಮುದಾಯದ 25,000 ಮತಗಳು ನಿರ್ಣಾಯಕವಾಗಿವೆ. ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರಬಲವಾಗಿರುವ ಕಾರಣ ಶ್ರೀರಾಮುಲು ಅವರಿಗೆ ಸಹಾಯವಾಗಬಹುದು.

ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಜೊತೆಗೆ ಕುರುಬ ಸಮುದಾಯದ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯಲ್ಲಿ ಕಡೆ ಕ್ಷಣದವರೆಗೂ ಆಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮೂಡಿದ್ದು ಹಿನ್ನಡೆಯಾಗಬಹುದು.

Comments

Leave a Reply

Your email address will not be published. Required fields are marked *