ಸಿಎಂಗೆ ಇ.ಡಿ ಬಂದ ಮೇಲೆ ಭಯ ಆಗಿದೆ, ಅದಕ್ಕೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ: ಜೋಶಿ

ಹುಬ್ಬಳ್ಳಿ: ಸಿದ್ದರಾಮಯ್ಯನವರಿಗೆ ಇ.ಡಿ ಬಂದ ಮೇಲೆ ಭಯ ಆಗಿದೆ. ಭಯ ಇರೋ ಕಾರಣಕ್ಕೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಮೋದಿ ಮತ್ತು ಅಮಿತ್ ಶಾ ಅವರಿಗೆ ಭಯವೇ ಇಲ್ಲ. ಆದರೆ ಸಿಎಂ ಅವರಿಗೆ ಭಯ ಇದೆ. ಸಿಎಂ ಇದುವರೆಗೂ ಲಾಜಿಕಲ್ ಉತ್ತರವನ್ನೆ ಕೊಟ್ಟಿಲ್ಲ. ಮುಡಾದಲ್ಲಿ ನಾವು ಹೇಳಿರೋದು ವಿವಾದ ಆದ್ರೆ ಕೋರ್ಟ್ ಹೇಳಿದ್ದೇನು? ನಿಮ್ಮ ಹಸ್ತಕ್ಷೇಪ ಇಲ್ಲದೆ ಇದು ಆಗಿಲ್ಲ ಎಂದು ಕೋರ್ಟ್ ಕೂಡಾ ಸ್ಪಷ್ಟವಾಗಿ ಹೇಳಿದೆ ಎಂದರು. ಇದನ್ನೂ ಓದಿ: ಜಮೀನು ವಿವಾದ ಹಿನ್ನೆಲೆ 17 ವರ್ಷದ ಬಾಲಕನ ಶಿರಚ್ಛೇದನ – 6 ಮಂದಿಯ ವಿರುದ್ಧ ಎಫ್‌ಐಆರ್

ಇನ್ನೂ ಶಕ್ತಿ ಯೋಜನೆ ಮಾರ್ಪಾಡು ಮಾಡೋ ವಿಚಾರವಾಗಿ ಸರ್ಕಾರದ ಬಳಿ ಪೆಟ್ರೋಲ್ ಹಾಕಿಸುವುದಕ್ಕೆ ದುಡ್ಡಿಲ್ಲ. ಇವರಿಗೆ ಯಾರದರೂ ಫ್ರೀ ಕೊಡಿ ಎಂದು ಟ್ವೀಟ್ ಮಾಡಿದ್ರಾ? ಇವಾಗ ಯಾಕೆ ಟ್ವೀಟ್ ಮಾಡುತ್ತಾರೆ? ಸರ್ಕಾರದ ಬಳಿ ದುಡ್ಡೆ ಇಲ್ಲ. ಹೀಗಾಗಿ ನೆಪ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ:  ಬಿಜೆಪಿ, ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ ಎಂದು ನೂರಾರು ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ: ಡಿಕೆಶಿ

ಬುಧವಾರ ಸವಣೂರು (Savanuru) ತಾಲೂಕಿನ ಕಡಕೋಳದಲ್ಲಿ ಗಲಾಟೆಯಾಗಿದೆ. ಅಲ್ಲಿ 30 ಜನರ ಮೇಲೆ ಕೇಸ್ ಆಗಿದೆ. ಇದರಲ್ಲಿ ಒಬ್ಬ ಕೂಡ ಮುಸ್ಲಿಂ ಇಲ್ಲ. ಅಲ್ಲಿರೋ ಸಿಇಒ ಕತ್ತೆ ಕಾಯ್ತಾನಾ? ನಾನು ಅವನನ್ನು ಕೋರ್ಟ್ನಲ್ಲಿ ನಿಲ್ಲಿಸುತ್ತೇನೆ ಎಂದು ಹಾವೇರಿ ಸಿಇಒ ವಿರುದ್ಧ ಸಚಿವರು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.