ಎರಡು ದಶಕಗಳ ಮುನಿಸಿಗೆ ಬ್ರೇಕ್‌ – ಹರಿಪ್ರಸಾದ್‌ ನಿವಾಸದಲ್ಲಿ ಉಪಹಾರ ಸವಿದ ಸಿಎಂ

– ಪವರ್‌ ಶೇರಿಂಗ್‌ ವದಂತಿ ಮಧ್ಯೆ ಅಚ್ಚರಿಯ ಭೇಟಿ

ಬೆಂಗಳೂರು: ಅಧಿಕಾರ ಹಂಚಿಕೆ ವದಂತಿ ನಡುವೆ ಸಿಎಂ ಸಿದ್ದರಾಮಯ್ಯ (CM Siddaramaiah)  ಎರಡು ದಶಕಗಳ ಮುನಿಸು ಮರೆತು ಕಾಂಗ್ರೆಸ್ ರೆಬಲ್ ನಾಯಕ ಬಿಕೆ ಹರಿಪ್ರಸಾದ್‌ (BK Hariprasad) ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ಜೆಡಿಎಸ್‌ನಿಂದ (JDS)  ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಬಿ.ಕೆ.ಹರಿಪ್ರಸಾದ್ ಬೆಂಬಲ ಸಿಕ್ಕಿರಲಿಲ್ಲ ಎಂಬ ಕೋಪದಲ್ಲೇ 2 ದಶಕಗಳ ಕಾಲ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದರು.

ಕಾಂಗ್ರೆಸ್‌ಗೆ (Congress) ಬಹುಮತ ಸಿಕ್ಕಿದ್ದರೂ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ್ದಕ್ಕೆ ಸಿಎಂಗೆ ಸಡ್ಡು ಹೊಡೆದು ಹರಿಪ್ರಸಾದ್‌ ಪ್ರತ್ಯೇಕ ಅಹಿಂದ ಸಮಾವೇಶ ನಡೆಸಿದ್ದರು. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಸಿಎಂ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದರು. ಬಹಿರಂಗ ಹೇಳಿಕೆ ಜಾಸ್ತಿ ಆಗುತ್ತಿದ್ದಂತೆ ಹೈಕಮಾಂಡ್‌ ಪ್ರತ್ಯೇಕ ಸಿಎಂ ಹೇಳಿಕೆ, ಪವರ್ ಶೇರಿಂಗ್ ಟಾಕ್ ಬಗ್ಗೆ ಮಾತನಾಡದಂತೆ ಸೂಚನೆ ನೀಡಿತ್ತು.  ಇದನ್ನೂ ಓದಿ: ಕಾಂಗ್ರೆಸ್‌ ಹುದ್ದೆಗಳಿಗೆ ರಾಜೀನಾಮೆ – ಸಿಡಿದ ದಕ್ಷಿಣ ಕನ್ನಡ ಮುಸ್ಲಿಮರು

ಈ ಎಲ್ಲಾ ಎಲ್ಲಾ ಬೆಳವಣಿಗೆ ನಡುವೆ ಒಮ್ಮೆ ಸಿಎಂ ಅವರನ್ನು ಹರಿಪ್ರಸಾದ್ ಭೇಟಿ ಮಾಡಿದ್ದರು. ಈಗ ಖುದ್ದಾಗಿ ಹರಿಪ್ರಸಾದ್ ನಿವಾಸಕ್ಕೆ ಉಪಹಾರಕ್ಕೆ ಆಗಮಿಸಿ 2 ದಶಕದ ಮುನಿಸಿಗೆ ಸಿಎಂ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಪಕ್ಷದೊಳಗಿನ ತಮ್ಮ ವಿರುದ್ದ ಅಸಮಾಧಾನ ಹೊಂದಿರುವ ನಾಯಕನನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ನಿರ್ಬಂಧ ವಿಧಿಸಿ – ಶಿವರಾಜ ತಂಗಡಗಿ

ಹೈಕಮಾಂಡ್ ಮಟ್ಟದಲ್ಲಿ ಬಿ .ಕೆ.ಹರಿಪ್ರಸಾದ್ ತಮ್ಮದೇ ಹಿಡಿತವನ್ನು ಹೊಂದಿದ್ದಾರೆ. ಈಗ ದಿಢೀರ್‌ ಆಗಿ ಹರಿಪ್ರಸಾದ್‌ ಅವರನ್ನು ಭೇಟಿಯಾಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎರಡೂವರೆ ವರ್ಷದ ಪವರ್ ಶೇರಿಂಗ್ ಟಾಕ್ ನಡುವೆಯೇ ಅಸಮಧಾನಿತರನ್ನ ಒಗ್ಗೂಡಿಸಿ ಮಾಸ್ಟರ್ ಸ್ಟ್ರೋಕ್ ಕೊಡಲು ಸಿಎಂ ಮುಂದಾಗುತ್ತಿದ್ದಾರಾ ಎಂಬ ಚರ್ಚೆಯೂ ಆರಂಭವಾಗಿದೆ.