ತಾಯಂದಿರಿಗೆ ಸಿಎಂ ಸಿದ್ದರಾಮಯ್ಯ ಮಹಾಮೋಸ-ಮಹತ್ವದ ಮಡಿಲು ಕಿಟ್ ಯೋಜನೆಗೆ ತಿಲಾಂಜಲಿ

ಬೆಂಗಳೂರು: ಬಡವರ ಉಪಯೋಗಕಾರಿ ಮಡಿಲು ಯೋಜನೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸದ್ದಿಲ್ಲದೇ ಕತ್ತರಿ ಹಾಕುತ್ತಿದೆ. ಬಾಣಂತಿಯರ ಆರೈಕೆಗಾಗಿ ಇದ್ದ ಮಹತ್ವದ  ಯೋಜನೆಗೆ ಅನುದಾನ ನೀಡದೇ ತಾಯಂದಿರ ಪಾಲಿನ ಶತ್ರುವಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಡ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಮಡಿಲು ಕಿಟ್ ಯೋಜನೆಗೆ ತಿಲಾಂಜಲಿ ಇಟ್ಟಿದೆ. ಕಳೆದ ಎರಡು ವರ್ಷಗಳಿಂದ ಹಣ ಬಿಡುಗಡೆ ಮಾಡದೇ ತಾಯಿ-ಮಗುವಿನ ಆರೈಕೆಗೆಂದು ಇದ್ದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ `ಮಡಿಲು ಕಿಟ್’ ಹಳ್ಳ ಹಿಡಿದಿದೆ.

ಏನಿದು ಮಡಿಲು ಕಿಟ್?: ಬಡವರ್ಗಕ್ಕೆ ಸೇರಿದ ಗರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುಕೊಳ್ಳುವಂತೆ ಪ್ರೋತ್ಸಾಹಿಸುವುದು. ಹೆರಿಗೆ ಬಳಿಕ ಮಗು ಹಾಗೂ ತಾಯಿ ಆರೈಕೆಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ನೀಡುವುದು. ಈ ಕಿಟ್ ನಲ್ಲಿ ಸೊಳ್ಳೆ ಪರದೆ, ತಾಯಿಯ ಹೊಟ್ಟೆಗೆ ಕಟ್ಟುವ ಬಟ್ಟೆ, ಸ್ಯಾನಿಟರಿ ಪ್ಯಾಡ್, ಬೇಬಿ ಸೋಪು, ಬೇಬಿ ಪೌಡರ್, ಮಗುವಿಗೆ ಸ್ವೆಟರ್, ಸಾಕ್ಸ್ ಸೇರಿ ಇತರೆ ಸಾಮಾಗ್ರಿಗಳಿರುತ್ತವೆ.

2007ರಲ್ಲಿ ಪ್ರಾರಂಭವಾದ ಮಡಿಲು ಯೋಜನೆಯಿಂದ ವಾರ್ಷಿಕ ಸುಮಾರು 2 ಲಕ್ಷಕ್ಕೂ ಹೆಚ್ಚು ಬಾಣಂತಿಯರಿಗೆ ಪ್ರಯೋಜನವಾಗುತ್ತಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಕೇವಲ ಮೊದಲ ಎರಡು ವರ್ಷ ಯೋಜನೆಗೆ ಹಣ ನೀಡಿ ಕಳೆದ 2 ವರ್ಷಗಳಿಂದ ಹಣವೇ ನೀಡಿಲ್ಲ. 2014-15ರಲ್ಲಿ 62 ಕೋಟಿ ರೂಪಾಯಿ, 2015-16ರಲ್ಲಿ 37 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆದ್ರೆ 2016-17 ಹಾಗೂ 2017-18 ಸಾಲಿಗೆ ಸರ್ಕಾರ ಹಣ ಬಿಡುಗಡೆಯೇ ಮಾಡಿಲ್ಲ. ಬಜೆಟ್‍ನಲ್ಲಿ ಅನುದಾನ ನೀಡಿಲ್ಲದ್ದರಿಂದ ಹಣ ಬಿಡುಗಡೆ ಆಗಿಲ್ಲ ಅಂತ ಆರೋಗ್ಯ ಇಲಾಖೆ ಹೇಳುತ್ತಿದೆ. ಸಚಿª ರಮೇಶ್ ಕುಮಾರ್ ಯುನಿರ್ವಸಲ್ ಕಾರ್ಡ್ ಮಾಡುತ್ತಿದ್ದೇವೆ. ಹಾಗಾಗಿ ಸದ್ಯಕ್ಕೆ ಈ ಯೋಜನೆಯನ್ನು ಸ್ಟಾಪ್ ಮಾಡಿದ್ದೇವೆ ಎಂದು ಹೇಳುತ್ತಾರೆ.

ಯುನಿರ್ವಸಲ್ ಕಾರ್ಡ್‍ನಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ನೀಡ್ತಾರೆ. ಆದ್ರೆ ತಾಯಿ-ಮಗುವಿನ ಆರೈಕೆಗೆ ಸಾಮಗ್ರಿ ನೀಡೋಲ್ಲ. ಅಷ್ಟಕ್ಕೂ ಯುನಿರ್ವಸಲ್ ಕಾರ್ಡ್ ಬರ್ತಿರೋದು ಈಗ. ಕಳೆದ ಎರಡು ವರ್ಷದಿಂದ ಮಡಿಲು ಕಿಟ್‍ಗೆ ಕೊಕ್ ನೀಡಿದ್ದು ಯಾಕೆ ಅನ್ನೋದು ಮಾತ್ರ ತಿಳಿಯುತ್ತಿಲ್ಲ.

Comments

Leave a Reply

Your email address will not be published. Required fields are marked *