ಜೋಡೆತ್ತುಗಳಲ್ಲ ಇವು, ಪೈರನ್ನು ರಾತ್ರಿ ಕದ್ದು ತಿನ್ನೋ ಎತ್ತುಗಳು – ದರ್ಶನ್, ಯಶ್ ವಿರುದ್ಧ ಎಚ್‍ಡಿಕೆ ಕಿಡಿ

– ಡಿ. ಬಾಸ್‍ಗೆ ಡಿಚ್ಚಿ ಕೊಟ್ಟ ಸಿಎಂ

ಬೆಂಗಳೂರು: ಜನರ ಮುಂದೆ ರೈತರ ಮುಂದೆ `ಡಿ ಬಾಸ್’ ಆಗಲು ಆಗಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾ ಅವರು ದರ್ಶನ್ ಮತ್ತು ಯಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಚಾಲೆಂಜಿಂಗ್ ಸ್ಟಾರ್ ಬಳಸಿರುವ ಪದ ಕೆಲವರು ಕೇಳಿರಬಹುದು. ಸಿನಿಮಾದಲ್ಲಿ ಡಿ ಬಾಸ್ ಆಗಬಹುದು ಜನರ ಮುಂದೆ, ರೈತರ ಮುಂದೆ ಎಂದು ಆಗಲು ಸಾಧ್ಯವಿಲ್ಲ. ಮಂಡ್ಯದ ಜನರು ಗುತ್ತಿಗೆ ಕೊಟ್ಟಿದ್ದಾರೆ. ಅವರು ಕೊಂಡುಕೊಂಡಿದ್ದಾರ ಎಂದು ಕಿಡಿ ಕಾರಿದ್ದಾರೆ.

ಒಹೋ ಇವು ಜೊಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ. ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ದರು? ಅಮ್ಮನ ಮೇಲಿನ ಪ್ರೀತಿಯಿಂದ ಅವರನ್ನು ಉಳಿಸಲು ಬಂದಿದ್ದಾರಲ್ಲ. ಅಂದು ನಡೆದ ದುರಂತದಲ್ಲಿ ನೀರಲ್ಲಿ ಬಿದ್ದಿದ್ದ ಶವಗಳನ್ನು ತೆಗೆಯಲು ಅವರು ಬಂದಿದ್ದರ ಎಂದು ಸಿಎಂ ದರ್ಶನ್ ಮತ್ತು ಯಶ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತನಾಡಿದರೆ ತುಂಬ ವಿಷಯಗಳಿವೆ. ನಾಳೆ ಸಭೆಯಲ್ಲಿ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಚಲುವರಾಯಸ್ವಾಮಿ ವಿರುದ್ಧವೂ ಸಿಎಂ ಆಕ್ರೋಶ ಹೊರ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *