ರವಿ ಪೂಜಾರಿ ಬಂಧನ ಸಮ್ಮಿಶ್ರ ಸರ್ಕಾರದ ಯಶಸ್ಸು: ಸಿಎಂ ಎಚ್‍ಡಿಎಕೆ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಬಂಧನಕ್ಕೆ ಸಮ್ಮಿಶ್ರ ಸರ್ಕಾರದ ರಚನೆಯ ಆರಂಭದಲ್ಲೇ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರಲ್ಲಿ ರಾಜ್ಯ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಹಾಗೂ ಭಾರತದ ವಿದೇಶಾಂಗ ಇಲಾಖೆ ಪ್ರತಿನಿಧಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇದು ನಮ್ಮ ಯಶಸ್ಸು ಎಂದು ಸಿಎಂ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೂರವಾಣಿ ಮೂಲಕ ಉದ್ಯಮಿಗಳಿಗೆ ಹಾಗೂ ಗಣ್ಯರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿದ್ದ. ಇದರಲ್ಲಿ 2006 ರಿಂದಲೇ ನಮಗೇ ಕೃತ್ಯ ಎಸಗುವ ಬಗ್ಗೆ ಮಾಹಿತಿ ಲಭಿಸಿತ್ತು. ಆದ್ದರಿಂದ ಸರ್ಕಾರ ರಚನೆಯಾದ ಕೂಡಲೇ ಪೊಲೀಸರಿಗೆ ಕ್ರಮಕೈಗೊಳ್ಳಲು ಸೂಚಿಸಿದೆ. ಇದರಲ್ಲಿ ಕೇಂದ್ರದ ಸಹಕಾರ ಪಡೆದು ಹೆಚ್ಚಿನ ಮಾಹಿತಿ ಕಲೆ ಹಾಕಲಾಯಿತು. ಫೋನ್ ಕರೆ ಮಾಹಿತಿ ಮೇರೆಗೆ ಆತ ಸೆನೆಗಲ್ ನಲ್ಲಿದ್ದಾನೆ ಎಂಬ ಮಾಹಿತಿ ಲಭಿಸಿತ್ತು. ಆ ಬಳಿಕ ಅಲ್ಲಿನ ಸರ್ಕಾರದೊಂದಿಗೆ ಉತ್ತಮ ಸಂಪರ್ಕ ಏರ್ಪಡಿಸಿ ಆತನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ರವಿ ಪೂಜಾರಿ ಬಂಧನ ವಿಚಾರದಲ್ಲಿ ಯಾವುದೇ ತಪ್ಪು ಮಾಹಿತಿ ಹೋಗುವುದು ಬೇಡ. ಆತ ಸೆನೆಗಲ್ ನಲ್ಲಿ ಡಿಸೆಂಬರ್ 31 ರಂದು ಕ್ರಿಕೆಟ್ ಪಂದ್ಯಗಳನ್ನ ಏರ್ಪಡಿಸುವ ಬಗ್ಗೆ ಫೋಟೋ ಹಾಗೂ ಮಾಹಿತಿ ಲಭಿಸಿತ್ತು. ಇದರ ಆದರ ಮೇಲೆ ನಮ್ಮಲಿನ ಮಾಹಿತಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಆ ಬಳಿಕ ಜನವರಿ 19 ರಂದೇ ರವಿ ಪೂಜಾರಿಯ ಬಂಧನವಾಗಿದೆ. ಅಲ್ಲದೇ ಆತನನ್ನು ಭಾರತ ವಶಕ್ಕೆ ನೀಡಲು ಬೇಕಾದ ಕಾನೂನು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ರವಿ ಪೂಜಾರಿ ಬಂಧನದಲ್ಲಿ ನಮ್ಮ ಪೊಲೀಸರ ಸಾಧನೆ ಮೆಚ್ಚುವಂತಹದ್ದು, ಅಲ್ಲದ ಅಲ್ಲಿನ ವಿದೇಶಾಂಗ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಕೇರಳ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈತನ ಕೃತ್ಯಗಳು ನಡೆದಿದೆ. ಅಲ್ಲಿಂದಲೇ ಇಲ್ಲಿನ ಕೆಲ ವ್ಯಕ್ತಿಗಳೊಂದಿಗೆ ಮಾಡುತ್ತಿದ್ದ. ಆತನೊಂದಿಗೆ ಸಂಪರ್ಕದಲ್ಲಿದ್ದ ಕೆಲ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಪಡೆಯಲಾಯಿತು. ಪ್ರಕರಣದಲ್ಲಿ ನಮ್ಮ ಪೊಲೀಸರು ಬಹಳ ಮುಂದೆ ಇದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು.

ಇದೇ ವೇಳೆ ಮಂಡ್ಯದಿಂದ ಸುಮಲತಾ ಅವರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಮಂಡ್ಯ ಕ್ಷೇತ್ರ ನಮ್ಮ ಪಕ್ಷದ ಭದ್ರಕೋಟೆ. ಆದರೆ ಸುಮಲತಾ ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿಲ್ಲ. ಆ ಬಗ್ಗೆ ನಾವು ಹೇಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಲು ಅವಕಾಶವಿದೆ. ಅವರು ನಮ್ಮ ಪಕ್ಷದಲ್ಲಿ ಇಲ್ಲ ಆದ್ದರಿಂದ ಈ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಪಕ್ಷ ಟಿಕೆಟ್ ಬಗ್ಗೆ ಇನ್ನು ಚರ್ಚೆ ಆಗಿಲ್ಲ. ಚರ್ಚೆಗೆ ಬಂದಾಗ ಇದನ್ನ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *