ಸಿಎಂ ಎಚ್‍ಡಿಕೆಯಿಂದ ಪ್ರಧಾನಿ ಮೋದಿಗೆ ಸ್ಪೆಷಲ್ ಗಿಫ್ಟ್

ನವದೆಹಲಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಮೋದಿ ಅವರಿಗೆ ಒಂದು ಉಡುಗೊರೆಯನ್ನು ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರಿಗೆ ಒಂದು ಪುಸ್ತಕ ಕೊಟ್ಟಿದ್ದಾರೆ. “The Open Eyes: A Journey through Karnataka,”(ದಿ ಓಪನ್ ಐಸ್: ಎ ಜರ್ನಿ ಥ್ರೋ ಕರ್ನಾಟಕ) ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕರ್ನಾಟಕ ಸರ್ಕಾರ ಈ ಪುಸ್ತಕವನ್ನು 1976ರಲ್ಲಿ ಪ್ರಕಟಿಸಿತ್ತು. ಈ ಪುಸ್ತಕವನ್ನು ಸರ್ ಡಾಮ್ ಮೊರೇಸ್ ಬರೆದಿದ್ದಾರೆ. ಇವರು ಒಬ್ಬ ಪ್ರತಿಭಾನ್ವಿತ ಕವಿ, ಅಂಕಣಕಾರ ಹಾಗೂ ಪ್ರವಾಸಿ ಲೇಖಕರಾಗಿದ್ದಾರೆ.

ಕಳೆದ ತಿಂಗಳು ಪ್ರಧಾನಿ ಭೇಟಿಗೆ ಸಿಎಂ ಮನವಿ ಮಾಡಿದ್ದರು. ಆದರೆ ಪ್ರಧಾನಿ ಪ್ರವಾಸದ ಹಿನ್ನೆಲೆಯಲ್ಲಿ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಗೃಹ ಸಚಿವರಿಗೆ ಮನವಿ ಮಾಡಿ ಸಿಎಂ ಕುಮಾರಸ್ವಾಮಿ ವಾಪಸ್ ಬಂದಿದ್ದರು.

ಇಂದು ಸಿಎಂ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ವಿಪಕ್ಷ ನಾಯಕರು, ಪ್ರಧಾನಿ ಮೋದಿ ಅವರನ್ನ ಭೇಟಿಗಿದ್ದಾರೆ. ಕೊಡಗಿನಲ್ಲಿ ಅತಿವೃಷ್ಟಿ ಮಳೆಯಿಂದ ಸಾಕಷ್ಟು ಪ್ರಮಾಣದ ಹಾನಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರದಿಂದ ಪರಿಹಾರ ನೀಡುವಂತೆ ನಿಯೋಗ ಮನವಿ ಮಾಡಲು ಭೇಟಿ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *