104 ಶಾಸಕರಿದ್ದಾರೆ ಅಂತಾ ಹೇಳೋ ಗೋಮುಖ ವ್ಯಾಘ್ರನೇ ಸಮ್ಮಿಶ್ರ ಸರ್ಕಾರದ ವಿಲನ್: ಎಚ್‍ಡಿಕೆ

ಕಲಬುರಗಿ: ನಮ್ಮ ಬಳಿ 104 ಶಾಸಕರಿದ್ದಾರೆ ಅಂತಾ ಹೇಳೋ ಗೋಮುಖ ವ್ಯಾಘ್ರ ಇದ್ದಾರಲ್ಲ ಅವರೇ ಸಮ್ಮಿಶ್ರ ಸರ್ಕಾರದ ವಿಲನ್ ಅಂತಾ ಕಲಬುರಗಿಯಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದ ನಿಜವಾದ ವಿಲನ್ ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಎಂ ಈ ಹೇಳಿಕೆ ನೀಡುವ ಮೂಲಕ ಬಿಎಸ್ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಈ ಸರ್ಕಾರ ಸಂಪೂರ್ಣವಾದ ಸುಭದ್ರವಾದ ಸರ್ಕಾರವಾಗಿದ್ದು, ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರವರ ರಕ್ಷಣೆಯೇ ದೊಡ್ಡ ಮಟ್ಟದಲ್ಲಿ ಇದೆ. ಬಹಳ ಜನಕ್ಕೆ ಈ ವಿಷಯ ತಿಳಿಸಿಲ್ಲ. ಸಿದ್ದರಾಮಯ್ಯ ಅವರಿಂದಲೇ ಸಂಪೂರ್ಣವಾದ 5 ವರ್ಷದ ಈ ಅವಧಿ ಪೂರೈಸಲಿದೆ. ಸುಮ್ಮನೆ ಅವರನ್ನು ಕೆಲವೊಂದು ವರ್ಗದಲ್ಲಿ ಅನಾವಶ್ಯಕವಾಗಿ ಅವರ ಹೆಸರನ್ನು ಎಳೆಯುತ್ತಾರೆ. ಸಿದ್ದರಾಮಯ್ಯ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಇವತ್ತು ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಸಿದ್ದರಾಮಯ್ಯರಿಂದಲೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎಂಬುದೆಲ್ಲಾ ಸುಳ್ಳು ಅಂತ ಹೇಳುವ ಮೂಲಕ ಮಾಜಿ ಸಿಎಂ ಪರ ಎಚ್‍ಡಿಕೆ ಬ್ಯಾಟಿಂಗ್ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *