ಬಿಜೆಪಿ ಶಾಸಕನ ಮೂಲಕ ನಿರ್ಣಾಯಕ ಆಟಕ್ಕಿಳಿದ್ರಾ ಸಿಎಂ?

ಬೆಂಗಳೂರು: ದೋಸ್ತಿ ಸರ್ಕಾರ ಸೇಫ್ ಮಾಡಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಹಳೆಯ ಸ್ನೇಹಿತನ ಮೊರೆ ಹೋದ್ರಾ ಎಂಬ ಸಂಶಯವೊಂದು ರಾಜ್ಯ ರಾಜಕೀಯ ವಲಯದಲ್ಲಿ ಮೂಡಿಬಂದಿದೆ.

ಹೌದು. ಸಾಹುಕಾರ ರಮೇಶ್ ಜಾರಕಿಹೊಳಿಯವರನ್ನು ಜೆಡಿಎಸ್ ಗೆ ಸೆಳೆಯೋ ಪ್ಲಾನ್‍ಗೆ ಸಚಿವ ಡಿಕೆ ಶಿವಕುಮಾರ್ ಗರಂ ಆದ ಬೆನ್ನಲ್ಲೇ ಹೆಚ್‍ಡಿಕೆ ಮತ್ತೊಂದು ಪ್ಲಾನ್ ಮಾಡಿದ್ದಾರೆ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಲಕ ಸಿಎಂ ನಿರ್ಣಾಯಕ ಆಟಕ್ಕಿಳಿದಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.

ಸಹೋದರ ರಮೇಶ್ ಜಾರಕಿಹೊಳಿಯನ್ನು ಓಲೈಸುವ ಜವಾಬ್ದಾರಿಯನ್ನು ಬ್ರದರ್ ಬಾಲಚಂದ್ರ ಜಾರಕಿಹೊಳಿಗೆ ಸಿಎಂ ವಹಿಸಿದ್ದಾರೆ. ಕಾಂಗ್ರೆಸ್‍ನಲ್ಲೇ ಇರೋದು ಬೆಸ್ಟ್. ಬಿಜೆಪಿಗೆ ಹೋದರೆ ಸಮಸ್ಯೆ ಗ್ಯಾರಂಟಿ ಎಂದು ತಿಳಿ ಹೇಳಲು ಬಾಲಚಂದ್ರ ಅವರಿಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ದೋಸ್ತಿ ಸರ್ಕಾರ ಸೇಫ್ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಸಿಎಂ!

ಮತ್ತೊಂದೆಡೆ ಆಪರೇಷನ್ ಕಮಲ ಶುರುವಾದರೆ ರಿವರ್ಸ್ ಆಪರೇಷನ್‍ಗೆ ಸಿಎಂ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಸಾಧ್ಯವಾದ್ರೆ ನೀವೇ ನಮ್ಮ ಜೊತೆ ಬನ್ನಿ ಎಂದು ಬಾಲಚಂದ್ರಗೆ ಸಿಎಂ ಹೆಚ್‍ಡಿಕೆ ಆಫರ್ ನೀಡಿದ್ದಾರೆ. ಈ ಮೂಲಕ ಒಂದೆಡೆ ಅಣ್ಣನ ಮನವೊಲಿಕೆ ಮಾಡುವಂತೆ, ಇನ್ನೊಂದೆಡೆ ರಿವರ್ಸ್ ಆಪರೇಷನ್‍ಗೆ ಸಿಎಂ ಸ್ಕೆಚ್ ಹಾಕಿದ್ದಾರೆ. ಒಟ್ಟಿನಲ್ಲಿ ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯಲು ಸಿಎಂ ಯೋಜನೆ ರೂಪಿಸಿದ್ದು, ಇದರಲ್ಲಿ ಅವರು ಯಶಸ್ವಿ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕು.

Comments

Leave a Reply

Your email address will not be published. Required fields are marked *