ನನ್ನ ಪರ್ಸನಲ್ ವಿಚಾರ ನಿಮಗ್ಯಾಕ್ರಿ – ಕುಮಾರ್ ಬಂಗಾರಪ್ಪ ಮೀಟೂ ಆರೋಪಕ್ಕೆ ಸಿಎಂ ಕಿಡಿ

ಉಡುಪಿ: ತನ್ನ ವಿರುದ್ಧ ಮೀಟೂ ಆರೋಪ ಮಾಡಿರುವ ಶಾಸಕ ಕುಮಾರ್ ಬಂಗಾರಪ್ಪಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಬೈಂದೂರಲ್ಲಿ ಮಾಧ್ಯಮಗಳು ಕುಮಾರ್ ಬಂಗಾರಪ್ಪ ಹೇಳಿಕೆಯನ್ನು ಪ್ರಸ್ತಾಪಿಸಿ ಪ್ರಶ್ನೆ ಕೇಳಿದ್ದಕ್ಕೆ. ನನ್ನ ಪರ್ಸನಲ್ ವಿಚಾರ ನಿಮಗೆ ಯಾಕ್ರೀ ಎಂದು ಪ್ರಶ್ನಿಸಿ, ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ ಎಂದು ಗರಂ ಆಗಿ ಉತ್ತರಿಸಿದರು.

ಚುನಾವಣೆ ಸಂದರ್ಭ ವೈಯಕ್ತಿಕ ವಿಚಾರ ಚರ್ಚೆ ಮಾಡಲ್ಲ. ನಾನು ಪರ್ಸನಲ್ ಇಶ್ಯೂ ಚರ್ಚೆ ಮಾಡುವುದೇ ಇಲ್ಲ. ರಾಜಕೀಯ ವಿಚಾರ ಇದ್ದರೆ ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದ ಅವರು, ಕುಮಾರ ಬಂಗಾರಪ್ಪನ ಅಭಿರುಚಿ ಪ್ರದರ್ಶನವಾಗಿದೆ. ನಾನು ಈ ಬಗ್ಗೆ ಮಾತನಾಡಲ್ಲ. ಚುನಾವಣೆ ಸಂದರ್ಭ ಅಭಿವೃದ್ಧಿ ವಿಚಾರ ಚರ್ಚೆಯಾಗಲಿ. ನನಗೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ತಿರುಗೇಟು ನೀಡಿದರು.

ಬಂಗಾರಪ್ಪನ ಮಗನಾಗಿ ಕುಮಾರ್ ಬಂಗಾರಪ್ಪ ಏನು ಮಾಡಿದ್ದಾರೆ? ಶಿವಮೊಗ್ಗ ಜಿಲ್ಲೆಗೆ, ರಾಜ್ಯಕ್ಕೆ ಕುಮಾರ ಬಂಗಾರಪ್ಪ ನ ಕೊಡುಗೆ ಏನು? ಬಂಗಾರಪ್ಪ ಹೆಸರು ದುರುಪಯೋಗ ಪಡಿಸಿ ಮತ ಕೇಳುವ ಅವಶ್ಯಕತೆ ನಮಗಿಲ್ಲ ಅಂತ ಟಾಂಗ್ ಕೊಟ್ಟರು. ಮಧು ಬಂಗಾರಪ್ಪ ಸ್ಮಾರಕದ ವಿನ್ಯಾಸ ರೆಡಿ ಮಾಡಿದ್ದಾರೆ ಆ ಕೆಲಸ ಮಾಡುತ್ತೇವೆ ಅಂತ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=27NNhAoihSg

https://www.youtube.com/watch?v=DpUNtVrISZA

Comments

Leave a Reply

Your email address will not be published. Required fields are marked *