250 ವಿಕಲಚೇತನರಿಗೆ ಕೆಲಸದ ಆದೇಶ ಪತ್ರ- 30 ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು: ಜನತಾ ದರ್ಶನದಲ್ಲಿ ಕೆಲಸಕ್ಕಾಗಿ ಮನವಿ ಸಲ್ಲಿಸಿದ್ದ 250 ಜನರಿಗೆ ಮೊದಲ ಹಂತದಲ್ಲಿ ಉದ್ಯೋಗವನ್ನ ಸರ್ಕಾರ ನೀಡಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಫಲಾನುಭವಿಗೆ ಕೆಲಸದ ಆದೇಶ ಪತ್ರ ನೀಡಿದ್ದಾರೆ. ಬಳಿಕ ಮಾತಾನಾಡಿದ ಸಿಎಂ ಕುಮಾರಸ್ವಾಮಿ, ಇನ್ನು ಮುಂದೆ ಪ್ರತಿ ಜಿಲ್ಲೆಯಲ್ಲಿ ವಾರದಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ಜನರ ಸಮಸ್ಯೆ ಆಲಿಸಿ, ಪರಿಹಾರ ಮಾಡಬೇಕು. ಅವರಿಂದ ಸಮಸ್ಯೆ ಪರಿಹಾರವಾಗದೇ ಇದ್ದರೆ ನನ್ನ ಬಳಿ ಕಳುಹಿಸಬೇಕು. ಯಾವುದೇ ಅಧಿಕಾರಿ ಜನರ ಸಮಸ್ಯೆ ಆಲಿಸದೇ ಇದ್ದರೆ ವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳೋದಾಗಿ ಸಿಎಂ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಅಧಿಕಾರಿಗಳು ತಿಂಗಳಿಗೆ ಒಂದು ದಿನ ಜಿಲ್ಲೆಯಲ್ಲಿ ಇದ್ದು, ಸಮಸ್ಯೆಗಳನ್ನ ಪಟ್ಟಿ ಮಾಡಿ ನನಗೆ ವರದಿ ನೀಡಬೇಕು ಅಂತ ಸಿಎಂ ಆದೇಶ ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಗಳ ಕೆಲಸದ ಬಗ್ಗೆ ಮಾಹಿತಿ ಪಡೆಯಲು ವಿಡಿಯೋ ಕಾನ್ಪರೆನ್ಸ್ ಮಾಡೋದಾಗಿ ಸಿಎಂ ಹೇಳಿದ್ದಾರೆ. ಇವತ್ತೇ ಈ ಸಂಬಂಧ ಸುತ್ತೋಲೆ ಹೊರಡಿಸೋದಾಗಿ ಹೇಳಿದ ಸಿಎಂ ಜನ ಸಾಮಾನ್ಯರಿಗೆ ಅಧಿಕಾರಿಗಳು ಸುಲಭವಾಗಿ ಸಿಗೋದಕ್ಕಾಗಿ ಹಲವು ಸುಧಾರಣಾ ಕ್ರಮ ಜಾರಿಗೆ ತರೋದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *