ಕೊಪ್ಪಳ: ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಹೇಳುವವರಿಗೆ ಒಳ್ಳೆಯದಾಗಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಮಿಕವಾಗಿ ನುಡಿದಿದ್ದಾರೆ.
ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಹಲವು ಬಿಜೆಪಿ ಮುಖಂಡರು ವರಿಷ್ಠರಿಗೆ ದೂರು ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದರು. ವಯಸ್ಸಾಗಿದೆ ಎನ್ನುವವರಿಗೆ ಒಳ್ಳೆಯದಾಗಲಿ ಎಂದು ಹೇಳಿ ಹೊರಟರು.

ಪತ್ರಕರ್ತರ ಪ್ರಶ್ನೆಗೆ ಆಕ್ರೋಶದಿಂದಲೇ ಸಿಎಂ ಉತ್ತರಿಸಿ, ಹೊರಟು ಹೋದರು. ಇದಕ್ಕೂ ಮೊದಲು ಬಜೆಟ್ ಕುರಿತು ಮಾತನಾಡಿದ ಅವರು, ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆ ನಡೆದಿದೆ. ಈ ಬಾರಿ ಇನ್ನೊಂದು ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲ ಸದಸ್ಯರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಡಾ.ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸುವ ಐತಿಹಾಸಿಕ ಕಾರ್ಯಕ್ರಮ ಇದಾಗಿದ್ದು, ಸಂವಿಧಾನದ ಕನ್ನಡ ಅನುವಾದವನ್ನು ಎಲ್ಲ ಶಾಸಕರಿಗೂ ತಲುಪಿಸಿದ್ದೇವೆ. ಓದಿಕೊಂಡು ಬರಲು ಎಲ್ಲರಿಗೂ ತಿಳಿಸಿದ್ದು, ಮಾ.3 ಮತ್ತು 4 ರಂದು ಸದಸ್ಯರು ಸಂವಿಧಾನದ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.

Leave a Reply