14 ಸಚಿವರಿಗೆ ಹೆಚ್ಚುವರಿ ಹೊಣೆ ನೀಡಿದ ಬಿಎಸ್‍ವೈ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಬಳಿ ಉಳಿಸಿಕೊಂಡಿದ್ದ ಖಾತೆಗಳನ್ನು 14 ಸಚಿವರಿಗೆ ಹೆಚ್ಚುವರಿ ಹೊಣೆಯಾಗಿ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು 46 ಖಾತೆಗಳ ಪೈಕಿ ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ ಸೇರಿದಂತೆ 23 ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ರಾಜ್ಯದ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಕೆಲ ಖಾತೆಗಳ ಹೊಣೆಯನ್ನು ಹಂಚಿಕೆ ಮಾಡಿದ್ದಾರೆ.

ಯಾರಿಗೆ ಯಾವ ಹೊಣೆ?
ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ – ವೈದ್ಯಕೀಯ ಶಿಕ್ಷಣ, ಲಕ್ಷ್ಮಣ ಸವದಿ – ಕೃಷಿ, ಬಸವರಾಜ ಬೊಮ್ಮಾಯಿ – ಅವರಿಗೆ ಸಹಕಾರ ಖಾತೆಗಳ ಹೊಣೆ ನೀಡಿಲಾಗಿದೆ.

ಉಳಿದಂತೆ ಸಚಿವರಾದ ಕೆ.ಎಸ್.ಈಶ್ವರಪ್ಪ- ಯುವಜನ ಸೇವೆ, ಕ್ರೀಡೆ, ಆರ್. ಅಶೋಕ್ – ಪುರಸಭೆ, ಪಾಲಿಕೆ, ಸ್ಥಳೀಯ ಸಂಸ್ಥೆಗಳು (ಬೆಂಗಳೂರು ಹೊರತು ಪಡಿಸಿ), ಜಗದೀಶ್ ಶೆಟ್ಟರ್ – ಸಾರ್ವಜನಿಕ ಉದ್ಯಮ, ಶ್ರೀರಾಮುಲು – ಹಿಂದುಳಿದ ವರ್ಗ ಇಲಾಖೆ, ಸುರೇಶ್ ಕುಮಾರ್ – ಕಾರ್ಮಿಕ ಇಲಾಖೆ, ಸಿಟಿ ರವಿ – ಸಕ್ಕರೆ, ವಿ.ಸೋಮಣ್ಣ – ತೋಟಗಾರಿಕೆ ಮತ್ತು ರೇಷ್ಮೆ, ಸಿಸಿ ಪಾಟೀಲ್ – ಅರಣ್ಯ ಭೂವಿಜ್ಞಾನ ಮತ್ತು ಪರಿಸರ, ನಾಗೇಶ್ – ಸ್ಕಿಲ್ ಡೆವಲಪ್ಮೆಂಟ್, ಪ್ರಭು ಚೌಹಾಣ್ – ಅಲ್ಪಸಂಖ್ಯಾತ ಅಭಿವೃದ್ಧಿ ಮತ್ತು ಹಜ್ -ವಕ್ಫ್, ಶಶಿಕಲಾ ಜೊಲ್ಲೆ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಹೊಣೆ ಲಭಿಸಿದೆ.

Comments

Leave a Reply

Your email address will not be published. Required fields are marked *