ಸಾವು ನೋವುಗಳಿಗೆ ಮುಕ್ತಿ ನೀಡಿದ್ದಾರೆ ಗಡ್ಕರಿ: ಸಿಎಂ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ನಿತಿನ್ ಗಡ್ಕರಿ ಪಾತ್ರ ಸಾಕಷ್ಟಿದೆ. ಹುಬ್ಬಳ್ಳಿ ಬೈಪಾಸ್ ರಸ್ತೆ ನಿರ್ಮಾಣ ಮಾಡಿ ಈ ಭಾಗದ ಸಾಕಷ್ಟು ರಸ್ತೆ ಅಪಘಾತ ಹಾಗೂ ಸಾವು ನೋವುಗಳಿಗೆ ಮುಕ್ತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಡಿ ಹೊಗಳಿದ್ದಾರೆ.

ಹುಬ್ಬಳ್ಳಿಯ ರಸ್ತೆಗಳ ಲೋಕಾರ್ಪಣೆ ವೇದಿಕೆಯಲ್ಲಿ ಮಾತನಾಡಿದ ಸಿಎಂ ನಿತಿನ್ ಗಡ್ಕರಿ ಅವರಿಗೆ ಕೇಂದ್ರದಲ್ಲಿ ಸಾರಿಗೆ ಸಚಿವ ಸ್ಥಾನ ನೀಡಿದಾಗ ನಮಗೆ ಬಹಳಷ್ಟು ಸಂತೋಷವಾಗಿತ್ತು. ಅವರು ಮಹಾರಾಷ್ಟ್ರದಲ್ಲಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಇದೀಗ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮತ್ತೆ ಚಾಪು ಮೂಡಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ರಸ್ತೆಗಳು ಆರ್ಥಿಕ, ಸಾಂಸ್ಕೃತಿಕ ಹಾಗೂ ಕೃಷಿಯ ಬೆಳವಣಿಗೆಗೆ ಪೂರಕ: ಬೊಮ್ಮಾಯಿ

ದೇಶದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಚಾಪು ಮೂಡಿಸಿರುವ ಗಡ್ಕರಿ ಯಾರು ಮಾಡದ ಕಾರ್ಯಗಳನ್ನು ಮಾಡಿ ನಮ್ಮ ಮೋದಿಯವರ ಸರ್ಕಾರ ಮಾಡಿ ತೋರಿಸಿದ್ದಾರೆ ಎಂದು ಹಾಡಿ ಹೊಗಳಿದರು. ಇದನ್ನೂ ಓದಿ: ಉಕ್ರೇನ್‍ಗೆ ಭಾರತದಿಂದ ವೈದ್ಯಕೀಯ ನೆರವು: ಅರಿಂದಮ್ ಬಾಗ್ಚಿ

ಇದೇ ಸಂದರ್ಭದಲ್ಲಿ ಕೈಗಾದಿಂದ ಇಳಕಲ್ ರಸ್ತೆ ನಿರ್ಮಾಣವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ತುರ್ತಾಗಿ ಕಾಮಗಾರಿ ಕೈಗೊಳ್ಳಬೇಕೆಂದು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *