ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

ನವದೆಹಲಿ: ಓದಿದ್ದು 8ನೇ ತರಗತಿ, ಆದರೂ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು 12ಕ್ಕೂ ಹೆಚ್ಚು ಮಹಿಳೆಯರಿಗೆ (Women) ಮೋಸ ಮಾಡಿ ಲಕ್ಷಾಂತರ ಹಣ (Money) ಕೊಳ್ಳೆ ಹೊಡೆದ ಘಟನೆ ದೆಹಲಿಯಲ್ಲಿ (New Delhi) ನಡೆದಿದೆ.

ವಿಕಾಸ್ ಗೌತಮ್ ಬಂಧಿತ ಆರೋಪಿ. ಈತ ವಿಕಾಸ್ ಯಾದವ್ ಎಂಬ ಹೆಸರಿನಲ್ಲಿ ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್‍ನಲ್ಲಿ ನಕಲಿ ಖಾತೆಯನ್ನು ರಚಿಸಿದ್ದ. ಅಷ್ಟೇ ಅಲ್ಲದೇ ಖಾತೆಯನ್ನು ಅಧಿಕೃತ ಎಂದು ತೊರಿಸಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದ. ತಾನು ಸರ್ಕಾರಿ ಅಧಿಕಾರಿ ಎಂದು ಹೇಳಲು ಸರ್ಕಾರಿ ಕಾರಿನ ಮುಂದೆ ನಿಂತು ಪೋಸ್ ನೀಡಿದ್ದ.

ಅದಾದ ಬಳಿಕ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯೆಯೊಬ್ಬಳು (Doctor) ಆನ್‍ಲೈನ್‍ನಲ್ಲಿ ಪರಿಚಯವಾಗಿದ್ದಳು. ಪ್ರತಿದಿನ ಅವಳೊಂದಿಗೆ ಚಾಟ್ ಮಾಡಿ, ಅವಳನ್ನು ತಾನು ಸರ್ಕಾರಿ ಅಧಿಕಾರಿ ಎಂದು ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಆತ ವೈದ್ಯೆಯಿಂದ 25,000 ರೂ.ಯನ್ನು ಪಡೆದಿದ್ದಾನೆ. ಆದರೆ ವೈದ್ಯೆಗೆ ಈತ ಮೋಸ ಮಾಡುತ್ತಿದ್ದಾನೆ ಎಂದು ಸಂಶಯ ಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯೆ ಪೊಲೀಸರ ಬಳಿ ಹೋಗಲು ನಿರ್ಧರಿಸಿದ್ದಾಳೆ. ಆದರೆ ವಿಕಾಸ್ ತನಗೆ ರಾಜಕೀಯ ನಾಯಕರ ಸಂಪರ್ಕವಿದೆ ಎಂದು ಬೆದರಿಕೆ ಹಾಕಿದ್ದಾನೆ.

ಅದಕ್ಕೂ ಹೆದರದ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ವಿಕಾಸ್ ಇದೇ ರೀತಿ ಹೇಳಿಕೊಂಡು ಹತ್ತಾರು ಮಹಿಳೆಯರ ಬಳಿ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚುನಾವಣೆಗೆ ಸಮೀಪದಲ್ಲಿ ಡಿಕೆಶಿಗೆ ಶಾಕ್ – 5 ವರ್ಷದಲ್ಲಿ ಎಷ್ಟು ಆಸ್ತಿ ಹೆಚ್ಚಾಗಿತ್ತು? ತನಿಖೆ ಎಲ್ಲಿಯವರೆಗೆ ಬಂದಿದೆ?

ಘಟನೆಗೆ ಸಂಬಂಧಿಸಿ ವಿಕಾಸ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈತ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ. 8ನೇ ತರಗತಿ ಉತ್ತೀರ್ಣರಾದ ನಂತರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೆಲವು ವೆಲ್ಡಿಂಗ್ ಕೋರ್ಸ್ ಮಾಡಿದ್ದ. ಅದಾದ ಬಳಿಕ ವಿಕಾಸ್ ನಾಗರಿಕ ಸೇವಾ ಪರೀಕ್ಷಾ ಕೋಚಿಂಗ್ ಕೇಂದ್ರಗಳ ಕೇಂದ್ರವಾದ ಉತ್ತರ ದೆಹಲಿಯ ಮುಖರ್ಜಿ ನಗರದ ರೆಸ್ಟೋರೆಂಟ್‍ನಲ್ಲಿಯೂ ಕೆಲಸ ಮಾಡುತ್ತಿದ್ದ. ಆ ಪ್ರದೇಶದಲ್ಲಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ನೋಡಿ, ತಾನೂ ಐಪಿಎಸ್ ಅಧಿಕಾರಿಯಂತೆ ನಟಿಸುವ ಆಲೋಚನೆ ಬಂದಿದೆ ಎಂಬುದನ್ನು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್ – 3 ಲಷ್ಕರ್ ಉಗ್ರರ ಸಾವು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *