YSRP ಪೋಸ್ಟರ್‌ಗಳಿಗೆ ಹಾನಿ – 3, 4ನೇ ತರಗತಿಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸ್ರು

ಹೈದರಾಬಾದ್: ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‌ಪಿ) ಬ್ಯಾನರ್‌ಗಳನ್ನು ಹಾನಿಗೊಳಿಸಿದ 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಪಲ್ನಾಡು ಪ್ರದೇಶದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆಡಳಿತ ನಡೆಸುತ್ತಿರುವ ವೈಎಸ್‍ಆರ್‌ಪಿ ಪೋಸ್ಟರ್‌ಗಳನ್ನು ಹರಿದು ಹಾಕಿದರ ಕುರಿತಂತೆ ವಿಚಾರಣೆ ನಡೆಸಲು ಪೊಲೀಸರು ಅಪ್ರಾಪ್ತ ಬಾಲಕರನ್ನು ಠಾಣೆಗೆ ಕರೆದೊಯ್ದು ಸಂಜೆಯವರೆಗೂ ನೆಲದ ಮೇಲೆ ಕುರಿಸಿಕೊಂಡಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆ ಆಗಬೇಕು ಅಂತ ಪ್ರಶಾಂತ್ ಕಿಶೋರ್ ಬಯಸಿದ್ರು

cm jagan mohan reddy

ಈ ಕುರಿತಂತೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‍ಪಿ) ಜಯರಾಮ್ ಪ್ರಸಾದ್, ಕಟ್ಟಿದ್ದ ವೈಎಸ್‍ಆರ್‌ಪಿ ಪೋಸ್ಟರ್‌ಗಳಿಗೆ ಹಾನಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಚಾರಣೆ ನಡೆಸಲು ನಾವು ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಠಾಣೆಗೆ ಕರೆದಿದ್ದೇವೆ ಎಂದು ತಿಳಿಸಿದ್ದಾರೆ.

ವೈಎಸ್‍ಆರ್ ಸದಸ್ಯರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗ್ರಾಮದ 10ರಿಂದ 15 ವರ್ಷದೊಳಗಿನ ಕೆಲವು ಮಕ್ಕಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿ ಒಂದು ದಿನದ ಬಳಿಕ ಪೊಲೀಸರು ಮಕ್ಕಳನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಹೆಚ್ಚು ಗಮನಹರಿಸಬೇಕು: ರಾಹುಲ್ ಸಲಹೆ

ಈ ವಿಚಾರ ಹಬ್ಬುತ್ತಿದ್ದಂತೆಯೇ ತೆಲುಗು ದೇಶಂ ಪಕ್ಷ (ಟಿಡಿಪಿ) ಅಪ್ರಾಪ್ತ ಮಕ್ಕಳಿಗೆ ಕಿರುಕುಳ ನೀಡಿದ ವೈಸಿಪಿ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

Comments

Leave a Reply

Your email address will not be published. Required fields are marked *