ಸಿಎಂ ಸಭೆ ಬಳಿಕ ವಿಧಾನಸೌಧದಲ್ಲೇ ಎರಡು ಬಾರ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳ ನಡುವೆ ಗಲಾಟೆ

ಬೆಂಗಳೂರು: ವಿಧಾನಸೌಧದಲ್ಲೇ ಎರಡು ಬಾರ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳ ನಡುವೆ ಗಲಾಟೆ ನಡೆಯಿತು‌. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮುಗಿಸಿ ಹೊರ ಬಂದ ಬಳಿಕ ಮೂರನೇ ಮಹಡಿ ಕಾರಿಡಾರ್‌ನಲ್ಲಿ ಬಾರ್ ಅಸೋಸಿಯೇಷನ್ ಪ್ರತಿನಿಧಿಗಳು ಗಲಾಟೆ ಮಾಡಿಕೊಂಡರು.

ಪರಸ್ಪರ ಕೂಗಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಪ್ರತಿನಿಧಿಗಳು ಹೋಗಿದ್ದರು. ಪೊಲೀಸರು ಮಧ್ಯಪ್ರವೇಶ ಮಾಡಿ ಇಬ್ಬರನ್ನ ಕರೆದುಕೊಂಡು ಹೋಗಿ ಸಮಾಧಾನಪಡಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಅಬಕಾರಿ ಮಾರಾಟ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಜೆಟ್ ಪೂರ್ವ ಸಭೆ ನಡೆಸಿದರು. ಬೇಡಿಕೆ ಮತ್ತು ಅಹವಾಲುಗಳನ್ನು ಆಲಿಸಿದರು. ಸಭೆಯಲ್ಲಿ ಎಲ್ಲ ಅಸೋಸಿಯೇಷನ್‌ಗಳಿಗೆ ಮಾತನಾಡಲು ಅವಕಾಶ ಕೊಡಲಿಲ್ಲ, ಮರ್ಯಾದೆ ಕೊಡಲಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಬ್ಲ್ಯಾಕ್‌ಮೇಲ್ ಮಾಡಿದವರಿಗೆ ಮಾತನಾಡಲು ಅವಕಾಶ ಕೊಟ್ಟರು ಅಂತ ಆಕ್ರೋಶ ಹೊರಹಾಕಿದಾಗ, ಎರಡು ಅಸೋಸಿಯೇಷನ್‌ಗಳ ನಡುವೆ ಗಲಾಟೆ ನಡೆಯಿತು.