ಎಂಜಿನಿಯರ್ ಕೈಯಿಂದ ಫೈಲ್ ಕಿತ್ತುಕೊಂಡು ಓಡಿ ಹೋದ ಕಂಟ್ರಾಕ್ಟರ್

ಹಾಸನ: ಎಂಜಿನಿಯರ್ ಕೈಯಿಂದ ಗುತ್ತಿಗೆದಾರರೊಬ್ಬರು ಫೈಲ್ ಕಿತ್ತುಕೊಂಡು ಓಡಿ ಹೋದ ಅಚ್ಚರಿಯ ಘಟನೆ ಆಲೂರು ಪಟ್ಟಣದಲ್ಲಿರುವ ಕಾವೇರಿ ನೀರಾವರಿ ನಿಗಮದ ಹೇಮಾವತಿ ಪುನರ್ ವಸತಿ ವಿಭಾಗದ ಕಚೇರಿಯಲ್ಲಿ ನಡೆದಿದೆ.

ಪ್ರೀತಂ ಕೈಯಿಂದ ಫೈಲ್ ಕಿತ್ತುಕೊಂಡು ಓಡಿ ಹೋದ ಗುತ್ತಿಗೆದಾರ. ಎಸ್.ಸಿ.ಪಿ.ಟಿ.ಎಸ್.ಪಿ. ಯೋಜನೆಯಡಿ ಜಾರಿಯಾಗಿದ್ದ, ಕೊಳವೆಬಾವಿ ಕೊರೆಯುವ ಹಣ ಸಂದಾಯ ವಿಚಾರವಾಗಿ ಗೊಂದಲವಾಗಿದೆ.

ಕೇಶವ್ ಶಾಮಣ್ಣ ಮತ್ತು ಗಂಗಾಧರ್ ಆಚಾರಿ ಎಂಬ ಇಬ್ಬರು ಇದರ ಮೂಲ ಗುತ್ತಿಗೆದಾರರಾಗಿದ್ದು, ಇದನ್ನು ಕೊರೆಯಲು ಹಾಗೂ ಎಲೆಕ್ಟ್ರಿಕ್ ಕೆಲಸದ ಮೇಲೆ ಈ ಗುತ್ತಿಗೆ ಪಡೆದಿದ್ದರು. ಈ ಗುತ್ತಿಗೆಯನ್ನು ಪ್ರೀತಂ ಎಂಬುವವರಿಗೆ ಉಪ ಗುತ್ತಿಗೆಯಾಗಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂಲ ಗುತ್ತಿದೆರಾರರು ಮತ್ತು ಉಪ ಗುತ್ತಿಗೆದಾರರ ನಡುವೆ ಕಿತ್ತಾಟ ನಡೆದಿದೆ. ಇದನ್ನೂ ಓದಿ: ಮಾಧುಸ್ವಾಮಿ ವಿರುದ್ಧ ಮಾತಾಡಿಲ್ಲ, ಅಧಿಕಾರಿಗಳಿಗೆ ಛೀಮಾರಿ ಹಾಕಿ ಅಂದೆ ಅಷ್ಟೇ: ಬಸವರಾಜ್

ಪ್ರೀತಂ ಎಲೆಕ್ಟ್ರಿಕ್ ಕೆಲಸ ಮಾಡಿದ್ದ ಹಣ ಸಂದಾಯ ಮಾಡಿಲ್ಲ. ಹಣ ಸಂದಾಯವಾಗದೇ ಇದ್ದರೆ ಬಿಲ್ ಮಾಡಲು ಬಿಡುವುದಿಲ್ಲ ಎಂದು ತಕರಾರು ತೆಗೆದಿದ್ದರು. ಈ ವೇಳೆ ಎಂಜಿನಿಯರ್ ನವೀನ್ ಬಿಲ್ ಪಾವತಿ ಮಾಡಿಸಲು ಮೇಲಾಧಿಕಾರಿ ಸಹಿಗೆ ಫೈಲ್ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಉಪ ಗುತ್ತಿಗೆದಾರ ಪ್ರೀತಂ ಅವರ ಕೈಯಲ್ಲಿದ್ದ ಫೈಲ್ ಕಿತ್ತುಕೊಂಡು ಓಡಿ ಹೋಗಿದ್ದಾರೆ. ಇದನ್ನೂ ಓದಿ: ನಮ್ಮ ಜಿಲ್ಲೆಯನ್ನೇ ಹಾಳ್ ಮಾಡಿಬಿಟ್ಟಿದ್ದಾನೆ – ಮಾಧುಸ್ವಾಮಿ ವಿರುದ್ಧ ಬಸವರಾಜ್, ಬೈರತಿ ಗುಸು ಗುಸು

ಈ ಕುರಿತು ಪ್ರೀತಂ ವಿರುದ್ಧ ಪೊಲೀಸ್ ಠಾಣೆಗೆ ಇಂಜಿನಿಯರ್ ನವೀನ್ ದೂರು ನೀಡಿದ್ದು, ಅಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *