ಡಿಸಿ ಕಚೇರಿ ಎದುರೇ 2 ಗುಂಪುಗಳ ನಡುವೆ ಮಾರಾಮಾರಿ- ಪೊಲೀಸರಿಗೂ ಡೋಂಟ್‌ ಕೇರ್!

ಧಾರವಾಡ: ಬಡ್ಡಿ ಹಣದ ವಿಚಾರವಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದ ಘಟನೆ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿ ಬಂದ ಏಳೆಂಟು ಜನ ಹಣದ ವ್ಯವಹಾರಕ್ಕಾಗಿ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಪೇದೆಯೊಬ್ಬರು ಬಂದು, ಇಲ್ಲಿಂದ ಆಚೆಗೆ ಹೋಗಿ… ಇದು ಡಿಸಿ ಕಚೇರಿ ಎಂದು ಹೇಳಿದರೂ ಕೇಳಿಲ್ಲ. ಗುಂಪುಗಳಲ್ಲಿದ್ದವರು ಅಲ್ಲೇ ವಾಗ್ವಾದ ನಡೆಸಿ ಜಗಳಕ್ಕಿಳಿದಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳ ಕಿರುಕುಳ – ಸಾರಿಗೆ ನೌಕರ ಆತ್ಮಹತ್ಯೆ

ಮಾತಿಗೆ ಮಾತು ಬೆಳೆದು ಎರಡೂ ಗುಂಪುಗಳ ಮಧ್ಯೆ ತೀವ್ರ ಮಾರಾಮಾರಿ ನಡೆದಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಪೊಲೀಸರು ಗಲಾಟೆ ದೃಶ್ಯವನ್ನು ನೋಡುತ್ತ ನಿಂತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ದರ ಏರಿಕೆ: ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

POLICE JEEP

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಹೊಡೆದಾಟದಲ್ಲಿ ರೌಡಿ ಶಿಟರ್ ಅಲ್ಲಾವುದ್ದಿನ್ ನದಾಫ್ ಹೆಸರು ಕೇಳಿಬಂದಿದೆ. ರೌಡಿ ಶೀಟರ್‌, ಯುವಕನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ, ಗಲಾಟೆ ಮಾಡಿದವರ ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *