ರಾಯಚೂರು ನಗರಸಭೆ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ – ಸಾವಿನ ಸಂಖ್ಯೆ ಐದಕ್ಕೆ ಏರಿಕೆ

ರಾಯಚೂರು: ನಗರದಲ್ಲಿ ಕಲುಷಿತ ನೀರಿಗೆ ಐದನೇ ಬಲಿಯಾಗಿದೆ. ನಗರಸಭೆ ಪೂರೈಸುತ್ತಿರುವ ಕಲುಷಿತ ನೀರು ಸೇವಿಸಿ ಮತ್ತೋರ್ವ ಸಾವನ್ನಪ್ಪಿದ್ದಾನೆ. ಈಗಾಗಲೇ ವಾಂತಿ ಭೇದಿಯಿಂದ ನಾಲ್ಕು ಸಾವು, ನೂರಾರು ಜನ ಆಸ್ಪತ್ರೆಗೆ ದಾಖಲಾಗಿದ್ದರೂ ನಗರಸಭೆ ಎಚ್ಚೆತ್ತುಕೊಳ್ಳದ ಹಿನ್ನೆಲೆ ಮತ್ತೊಬ್ಬ ವ್ಯಕ್ತಿ ಪ್ರಾಣ ಬಿಟ್ಟಿದ್ದಾನೆ.

ಈಗಾಗಲೇ ಅವಾಂತರವಾದರೂ ಕಲುಷಿತ ನೀರನ್ನೇ ಜನರಿಗೆ ಕುಡಿಯಲು ಸರಬರಾಜು ಮಾಡುತ್ತಿದೆ. ಹೀಗಾಗಿ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಗರದ ವಾರ್ಡ್ ಸಂಖ್ಯೆ 13ರ ಯರಗೆರಾ ಕಾಲೋನಿ ನಿವಾಸಿ ಜನಕರಾಜ್ (48) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

ಹೆಚ್ಚಾಗಿ ಮಧ್ಯಮವರ್ಗ, ಬಡ ಕುಟುಂಬಗಳು ವಾಸಿಸುತ್ತಿರುವ ಪ್ರದೇಶಗಳಲ್ಲೇ ಕಲುಷಿತ ನೀರು ಕುಡಿದು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

ರಿಮ್ಸ್ ವೈದ್ಯರು ಮೃತ ಜನಕರಾಜ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ. ವಾಂತಿ ಭೇದಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದಾಗ ಪ್ರಜ್ಞೆ ಇರಲಿಲ್ಲ. ನಾಲ್ಕು ದಿನಕಾಲ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿದರೂ ರೋಗಿಯನ್ನು ಉಳಿಸಲು ಆಗಲಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ನಗರಸಭೆಗೆ ಇನ್ನೆಷ್ಟು ಬಲಿ ಬೇಕಿದೆಯೋ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಕನಿಷ್ಠ ಹೆಚ್ಚು ಜನ ಬಾಧಿತರಿರುವ ಪ್ರದೇಶಗಳಿಗಾದರೂ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಈಗಲೂ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕಿದೆ.

Comments

Leave a Reply

Your email address will not be published. Required fields are marked *