ಹಿಂಸಾಚಾರ ನಿಂತ ಬಳಿಕವಷ್ಟೇ ಅರ್ಜಿ ವಿಚಾರಣೆ – ಸುಪ್ರೀಂ ಕೋರ್ಟ್

ನವದೆಹಲಿ: ಹಿಂಸಾಚಾರ ನಿಲ್ಲಿಸಿದ ಬಳಿಕವಷ್ಟೇ ಬಳಿಕವಷ್ಟೇ ವಿದ್ಯಾರ್ಥಿಗಳ ಕುರಿತಾಗಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಎಸ್.ಎ.ಬೊಬ್ಡೆ ಹೇಳಿದ್ದಾರೆ.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಉತ್ತರ ಪ್ರದೇಶದ ಅಲಿಗಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂನಲ್ಲಿ ನಡೆಯಿತು.

ವಿಚಾರಣೆ ಸಂದರ್ಭದಲ್ಲಿ ಮೊದಲು ಹಿಂಸಾಚಾರದ ಪ್ರತಿಭಟನೆ ನಿಲ್ಲಬೇಕು. ಹಿಂಸಾಚಾರ ನಿಂತ ನಂತರವೇ ಅರ್ಜಿ ವಿಚಾರಣೆ ಮಾಡಲಾಗುವುದು. ಹಿಂಸಾಚಾರ ನಿಲ್ಲದೇ ಇದ್ದರೆ ಅರ್ಜಿ ವಿಚಾರಣೆ ನಡೆಸುವುದಿಲ್ಲ ಎಂದು ಸೂಚಿಸಿದೆ.

ಪ್ರತಿಭಟನೆ ನಡೆಸುತ್ತಿರುವವರು ವಿದ್ಯಾರ್ಥಿಗಳು ಎನ್ನುವ ಒಂದೇ ಕಾರಣಕ್ಕೆ ಕಾನೂನನ್ನು ಕೈಗೆತ್ತುಕೊಳ್ಳುವಂತಿಲ್ಲ. ಪ್ರತಿಭಟನೆ ನಿಂತ ಬಳಿಕ ಅರ್ಜಿಯನ್ನು ವಿಚಾರಣೆ ನಡೆಸಲಾಗುವುದು ಎಂದು ಹೇಳಿ ನಾಳೆಗೆ ಮುಂದೂಡಿತು.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಅಲಿಗಡ ವಿಶ್ವವಿದ್ಯಾಲಯದ ಪರವಾಗಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದರು. ವಕೀಲ ಕಾಲಿನ್ ಗೊನ್ಸಾಲ್ವ್ಸ್ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ಜಾಮಿಯಾ ಮಿಲಿಯಾ ಪ್ರಕರಣದ ತನಿಖೆ ನಡೆಸಬೇಕೆಂದು ಮನವಿ ಮಾಡಿದರು. ಈ ವೇಳೆ ಹಿರಿಯ ವಕೀಲರು, ಪೊಲೀಸರ ದೌರ್ಜನ್ಯದ ವಿಡಿಯೋ ನೋಡಿ ನಿಮಗೆ ಪ್ರಕರಣದ ತೀವ್ರತೆ ತಿಳಿಯುತ್ತದೆ ಎಂದಾಗ ಬೊಬ್ಡೆ, ನಾವು ಯಾವುದೇ ವಿಡಿಯೋ ವೀಕ್ಷಿಸುವುದಿಲ್ಲ. ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದರೆ ಅರ್ಜಿ ವಿಚಾರಣೆ ನಡೆಸುವುದೇ ಇಲ್ಲ ಎಂದು ಖಡಕ್ ಆಗಿ ಸೂಚಿಸಿದರು.

Comments

Leave a Reply

Your email address will not be published. Required fields are marked *