ಬರಲಿ ಚೆಂದ ಬರಲಿ ನ್ಯೂಸ್ ಹಾಕ್ರಿ – ಮಾಧ್ಯಮಗಳ ಮುಂದೆ ಆರೋಪಿಗಳ ದರ್ಪ

ಕಲಬುರಗಿ: ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆಯನ್ನು ಸಿಐಡಿ ಮತ್ತಷ್ಟು ತೀವ್ರಗೊಳಿಸಿದೆ. ಪ್ರಕರಣದ ಕಿಂಗ್‍ಪಿನ್ ಕಲಬುರಗಿ ಜಿಲ್ಲೆಯವನೇ ಎಂಬ ಶಂಕೆ ಹಿನ್ನೆಲೆ ಸಿಐಡಿ ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿಯೇ ಠಿಕಾಣಿ ಹೂಡಿ ತನಿಖೆ ಚುರುಕುಗೊಳಿಸಿದ್ದಾರೆ.

ಸಿಐಡಿ ಡಿಜಿ ಪಿ.ಎಸ್ ಸಂದು, ಮತ್ತು ಸಿಐಡಿ ಎಸ್ಪಿ ರಾಘವೇಂದ್ರ ಹೆಗ್ಗಡೆ ಕಲಬುರಗಿಗೆ ಬಂದು ಮೊಕ್ಕಾಂ ಹೂಡಿದ್ದಾರೆ. ಸ್ವತಃ ತನಿಖೆಯ ಉಸ್ತುವಾರಿ ಸಿಐಡಿ ಡಿಜಿ ನೋಡಿಕೊಳ್ಳುತ್ತಿದ್ದಾರೆ. ನಗರದ ಸಿಐಡಿ ಕಛೇರಿಗೆ ಆಗಮಿಸಿದ ಎಸ್ಪಿ ತನಿಖೆಯ ಪ್ರಗತಿ ಪರಿಶೀಲನೆ ಮಾಡುತ್ತಿದ್ದಾರೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

ಪಾಟೀಲ್ ಬ್ರದರ್ಸ್ ದರ್ಪ:
ಇನ್ನೊಂದೆಡೆ ಪ್ರಕರಣದ ಕಿಂಗ್‍ಪಿನ್ ಎನ್ನಲಾದ ಪಾಟೀಲ್ ಬ್ರದರ್ಸ್ ಸಿಐಡಿ ವಶದಲ್ಲಿದ್ದರೂ ದರ್ಪ ಕಡಿಮೆ ಆಗುತ್ತಿಲ್ಲ. ಒಂದೆಡೆ ಆರ್.ಡಿ.ಪಾಟೀಲ್ ಕ್ಯಾಮೆರಾಗಳಿಗೆ ಬೊಟ್ಟು ತೋರಿಸಿ ಫ್ರೀ ಪ್ರಚಾರ ಮಾಡುತ್ತಿದ್ದೀರಿ ಮಾಡಿ ಅಂತ ಹೇಳುತ್ತಿದ್ದಾನೆ. ಸಿಐಡಿ ವಶದಲ್ಲಿರುವ ಕಾರಣ ರಾತ್ರಿ ಎಂ.ಬಿ ನಗರ ಠಾಣೆಯ ಕಂಬಿ ಹಿಂದೆ ಇಟ್ಟರೆ ಅಲ್ಲಿಯೂ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತು ದರ್ಪ ತೋರಿದ್ದಾನೆ. ಲಾಕಪ್‍ನಲ್ಲಿ ಆರ್.ಡಿ.ಪಾಟೀಲ್‍ಗೆ ವಿಶೇಷ ಆತಿಥ್ಯ ಸಿಗುತ್ತಿದೇಯಾ ಎಂಬ ಅನುಮಾನ ಕೂಡಾ ಕಾಡುತ್ತಿವೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

ಇದಕ್ಕೆ ಪೂರಕವಾಗಿ ಲಾಕಪ್‍ನಲ್ಲಿಯೂ ಕುಳಿತುಕೊಳ್ಳಲು ಕುರ್ಚಿ ಕೊಟ್ಟಿರುವ ಫೋಟೋ ವೈರಲ್ ಆಗಿದೆ. ಮತ್ತೊಂದೆಡೆ ಆರೋಪಿ ಮಹಾಂತೇಶ್ ಪಾಟೀಲ್ ಜಬರ್ದಸ್ತ್ ದೌಲತ್ ತೋರಿದ್ದಾನೆ. ಕ್ಯಾಮೆರಾಗಳ ಮುಂದೆ ದೌಲತ್ ತೋರಿದ ಆರೋಪಿ ಮಹಾಂತೇಶ್ ಪಾಟೀಲ್, ಹಾಕಿರಿ ಹಾಕಿರಿ ಚೆಂದ ಆಗಿ ಹಾಕಿರಿ ಟಿವಿಯಲ್ಲಿ ನ್ಯೂಸ್, ದುಡ್ಡು ಕೊಟ್ಟರು ಟಿವಿಯಲ್ಲಿ ಜಾಹೀರಾತು ಬರೋದಿಲ್ಲ. ಬರಲೀ ಚೆಂದ ಬರಲಿ ನ್ಯೂಸ್ ಅಂತಾ ಇಂದು ಮೆಡಿಕಲ್ ಟೆಸ್ಟ್ ಮಾಡಿಸಿ ಸಿಐಡಿ ಕಚೇರಿಗೆ ಕರೆತರುವಾಗ ಮಹಾಂತೇಶ್ ಇಂತಹ ಧಿಮಾಕಿನ ಮಾತು ಆಡಿದ್ದಾನೆ.

/p>

Comments

Leave a Reply

Your email address will not be published. Required fields are marked *