ಡೀಪ್‌ಫೇಕ್‌, ಡಾರ್ಕ್‌ವೆಬ್‌ ಕಡಿವಾಣಕ್ಕೆ CID ಮಾಸ್ಟರ್‌ ಪ್ಲ್ಯಾನ್‌ – ದೇಶದಲ್ಲೇ ದಿ ಬೆಸ್ಟ್‌ ಸೈಬರ್ ಟೆಕ್ನಾಲಜಿ ಎಂಬ ಹೆಮ್ಮೆ

ಬೆಂಗಳೂರು: ಇತ್ತೀಚೆಗೆ ಸ್ಟಾರ್‌ ನಟಿಯರನ್ನು ಹೆಚ್ಚಾಗಿ ಕಾಡುತ್ತಿರುವ ಡೀಪ್‌ಫೇಕ್ (Deep Fake) ಮತ್ತು ಡಾರ್ಕ್‌ವೆಬ್‌ಗೆ (Dark Web) ಕಡಿವಾಣ ಹಾಕಲು ಸಿಐಡಿ ಸಜ್ಜಾಗಿದ್ದು, 6 ವಿದೇಶಿ ನುರಿತ ತಜ್ಞರಿಂದ ತರಬೇತಿ ಕೊಡಿಸಲಾಗುತ್ತಿದೆ. ಈ ಮೂಲಕ ಭಾರತದಲ್ಲೇ ದಿ ಬೆಸ್ಟ್‌ ಸೈಬರ್ ಟೆಕ್ನಾಲಜಿ (Cyber Technology) ಹೊಂದಿರುವ ಹೆಮ್ಮೆ ರಾಜ್ಯದ ಸಿಐಡಿಗೆ ದೊರೆತಿದೆ.

ಇಲ್ಲಿ ಟ್ರೈನಿಂಗ್ ಪಡೆಯಲು ಮಿಲಿಟರಿ, ಕೇರಳ ಮತ್ತು ರಾಷ್ಟ್ರೀಯ ಗೃಹ ಸಚಿವಾಲಯ ತುದಿಗಾಲಲ್ಲಿ ನಿಂತಿವೆ. ಇನ್ಫೋಸಿಸ್‌, ಸಿಐಡಿ ಹಾಗೂ DSCI (ಡೆಟಾ ಸೆಕ್ಯೂರಿಟಿ ಸೈನ್ಸ್ ಆಫ್ ಇಂಡಿಯಾ) ಸಹಯೋಗದಲ್ಲಿ ನಡೆಯುತ್ತಿರೋ ತರಬೇತಿಯಲ್ಲಿ ಈಗಾಗಲೇ ರಾಜ್ಯದ ಸೆನ್ ಪೊಲೀಸ್ ಠಾಣೆ, ನ್ಯಾಯಾಧೀಶರು ಮತ್ತು ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

ಸದ್ಯ ರಾಷ್ಟ್ರದ ಮಿಲಿಟರಿಯ ಮೂರು ಪಡೆ, ಕೇರಳ ಪೊಲೀಸ್, MHA (ರಾಷ್ಟ್ರೀಯ ಗೃಹ ಸಚಿವಾಲಯ) ಸಜ್ಜಾಗಿದ್ದು, ಸಿಐಡಿಯೊಂದಿಗೆ ತರಬೇತಿ ನೀಡುವ ಕುರಿತು ಮಾತುಕತೆ ನಡೆಸಿವೆ. ಶೀಘ್ರದಲ್ಲೇ ಹಂತಹಂತವಾಗಿ ಕೇರಳ ಪೊಲೀಸ್, ಮಿಲಿಟರಿ ಸೇನೆ ಹಾಗೂ ಗೃಹಸಚಿವಾಲಯದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಮಿಲಿಟರಿ ಪಡೆಗೆ ಮುಖ್ಯವಾಗಿ ಸೈಬರ್ ಭದ್ರತೆ, ಡೇಟಾ ಪ್ರೊಟೆಕ್ಷನ್ ಕುರಿತು ತರಬೇತಿ ನೀಡಲಾಗುತ್ತದೆ.‌

ಸಿಐಡಿಯಲ್ಲಿ ಪ್ರತಿ ತಿಂಗಳೂ ಪೊಲೀಸರಿಗೆ ಸೈಬರ್ ಕ್ರೈಮ್‌ ತರಬೇತಿ ನೀಡಲಾಗುತ್ತಿದೆ. ಇಲ್ಲಿವರೆಗೂ 58 ನ್ಯಾಯಾಧೀಶರಿಗೆ, 31 ಸೆನ್ ಪೊಲೀಸ್ ಠಾಣೆ, 30 ನ್ಯಾಯಾಂಗ ಅಕಾಡೆಮಿ, 975 ಶಿಕ್ಷಣ ಸಂಸ್ಥೆಗಳಿಗೆ ತರಬೇತಿ ನೀಡಲಾಗಿದೆ. ಅಷ್ಟೇ ಅಲ್ಲದೇ ಸೈಬರ್ ತನಿಖೆ ಕುರಿತ 3 ಕೈಪಿಡಿಗಳನ್ನ ಬಿಡುಗಡೆ ಮಾಡಲಾಗಿದೆ. ಇನ್ನೂ ಎರಡು ಅತ್ಯಾಧುನಿಕ ಕೈಪಿಡಿಗಳನ್ನ ಸಿದ್ಧಗೊಳಿಸಿದ್ದು, ಶೀಘ್ರದಲ್ಲೆ ಬಿಡುಗಡೆಗೊಳಿಸಲಿದೆ. ಸಿಐಡಿ ಬಿಡುಗಡೆ ಮಾಡಿರೋ ಕೈಪಿಡಿ ಸದ್ಯ ದೇಶದ ಹಲವು ಸೈಬರ್ ಕೇಸ್ ಪತ್ತೆ ಕಾರ್ಯಕ್ಕೆ ನೆರವಾಗಿದೆ.

2018ರಲ್ಲಿ ತೆರೆ ಕಂಡಿದ್ದ ನಟ ವಿಶಾಲ್‌ ನಟನೆಯ ತಮಿಳು ಚಿತ್ರ ಇರುಂಬುತಿರೈ (ಕಬ್ಬಿಣದ ಪರದೆಯ ಹಿಂದೆ) ಚಿತ್ರದಲ್ಲಿ ಡಾರ್ಕ್‌ವೆಬ್‌ ಹಾಗೂ ಸೈಬರ್‌ ಕ್ರೈಮ್‌ಗಳ ಕುರಿತು ತೋರಿಸಲಾಗಿತ್ತು. ಈ ಚಿತ್ರ ಕರ್ನಾಟಕದಲ್ಲಿಯೂ ಸದ್ದು ಮಾಡಿತ್ತು. ಇದನ್ನೂ ಓದಿ: IPL 2024 Auction: ಇನ್‌ಸ್ಟಾದಲ್ಲಿ ವಾರ್ನರ್‌ ಬ್ಲಾಕ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌