ಗಂಗಾಧರ್ ಚಡಚಣ ಕೊಲೆ ಕೇಸ್: ಅಪ್ಪನ ಕೊಲೆಗೆ ಸಾಕ್ಷಿ ಕೊಟ್ಟಿತ್ತು ಪುಟ್ಟ ಕಂದಮ್ಮ!

ಬೆಂಗಳೂರು: ಒಂದು ವರ್ಷದ ಕಂದಮ್ಮನಿಂದಾಗಿ ಭೀಮಾತೀರದ ಹಂತಕ ಧರ್ಮರಾಜ್ ಸಹೋದರ ಗಂಗಾಧರ್ ಕೊಲೆ ಪ್ರಕರಣವನ್ನು ಸಿಐಡಿ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ.

ತೊಗರಿ ಫೀಲ್ಡ್‍ನಲ್ಲಿ ಗಂಗಾಧರ್ ಚಡಚಣನನ್ನು ಕತ್ತರಿಸಿ ಭೀಮಾ ನದಿಗೆ ಎಸೆಯಲಾಗಿತ್ತು. ಆದರೆ ಕೊಲೆಯಾದ ವ್ಯಕ್ತಿ ಗಂಗಾಧರನೇ ಎನ್ನುವುದು ಖಚಿತವಾಗಿರಲಿಲ್ಲ. ಹೀಗಾಗಿ ಕೊಲೆಯಾದ ಜಾಗದಲ್ಲಿ ದೊರೆತ ರಕ್ತ ಮಿಶ್ರಿತ ಮಣ್ಣನ್ನು ಹಾಗೂ ಗಂಗಾಧರನ ಒಂದು ವರ್ಷದ ಮಗನ ರಕ್ತವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶದಲ್ಲಿ ಪುಟ್ಟ ಕಂದಮ್ಮ ಮತ್ತು ಗಂಗಾಧರ್ ಡಿಎನ್‍ಎ ಸಾಮ್ಯತೆಯಾಗಿದ್ದನ್ನು ಬಲವಾದ ಸಾಕ್ಷ್ಯವನ್ನಾಗಿಸಿದ ಸಿಐಡಿ ಈಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಭೀಮಾತೀರದ ಹಂತಕ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಸಿಐಡಿ ಶುಕ್ರವಾರ ಇಂಡಿ ಜೆಎಂಎಫ್‍ಸಿ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಒಟ್ಟು 373 ಪುಟಗಳ ಚಾರ್ಜಶೀಟ್ ಸಲ್ಲಿಸಿರುವ ಸಿಐಡಿ ತಂಡ ಚಡಚಣ ಪಿಎಸೈ ಗೋಪಾಲ ಹಳ್ಳೂರ್, ಮೂವರು ಪೇದೆಗಳು ಮಹಾದೇವ ಭೈರಗೊಂಡ ಸೇರಿದಂತೆ 15 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಈ ಚಾರ್ಜ್ ಶೀಟ್ ನಲ್ಲಿ ಎಸ್‍ಐ ಗೋಪಾಲ್ ಹಳ್ಳೂರ್ ಧರ್ಮರಾಜ್‍ನನ್ನು ನಕಲಿ ಎನ್‍ಕೌಂಟರ್ ಮಾಡಿದ ಬಳಿಕ ಗಂಗಾಧರ್ ಚಡಚಣನನ್ನು ಭೈರಗೊಂಡನ ಕಡೆಯವರಿಗೆ ಒಪ್ಪಿಸಿದ್ದರು. ಗಂಗಾಧರ್ ಚಡಚಣ ಸಿಕ್ಕಿದ ಕೂಡಲೇ ಆತನನ್ನು ತೊಗರಿ ಫೀಲ್ಡ್ ನಲ್ಲಿ ಕತ್ತರಿಸಿ ಭೀಮಾ ನದಿಗೆ ಎಸೆಯಲಾಗಿತ್ತು ಎನ್ನುವ ಅಂಶವನ್ನು ಉಲ್ಲೇಖಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *