ಯಶ್ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ

ರಾಕಿ ಭಾಯ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಮನೆಯಲ್ಲಿ ಕ್ರಿಸ್ಮಸ್ ಹಬ್ಬದ (Christmas) ಸಂಭ್ರಮ ಜೋರಾಗಿದೆ. ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ. ಇದರ ವಿಡಿಯೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೊಂದು ಬಂಪರ್ ಆಫರ್ ಬಾಚಿಕೊಂಡ ಶ್ರೀಲೀಲಾ

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದ ಆಚರಣೆ ಇದ್ದೇ ಇರುತ್ತದೆ. ಕ್ರಿಸ್ಮಸ್ ಟ್ರೀ ಅನ್ನು ರೆಡಿ ಮಾಡಿಸಿದ್ದು, ಅದರ ಮುಂದೆ ಸಾಂತಾ ಕ್ಲಾತ್ ಡ್ರೆಸ್ ಧರಿಸಿ ಮಕ್ಕಳೊಂದಿಗೆ ರಾಧಿಕಾ ಮಿಂಚಿದ್ದಾರೆ. ಈ ವೇಳೆ, ಯಶ್ ಕೂಡ ಜಾಯಿನ್ ಆಗಿದ್ದಾರೆ. ಕ್ರಿಸ್ಮಸ್ ಹಬ್ಬದ ತಯಾರಿ ಹೇಗಿತ್ತು? ಎಂಬುದರ ಝಲಕ್ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

ಅಂದಹಾಗೆ, ಇತ್ತೀಚೆಗೆ ಯಶ್ ಮತ್ತು ರಾಧಿಕಾ ಪಂಡಿತ್ ‘ಯುಐ’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ಉಪೇಂದ್ರ ಕಥೆ ಹೇಳಿರುವ ರೀತಿ ಕಂಡು ಮೆಚ್ಚಿದ್ದರು. ಸಿನಿಮಾದ ಪ್ರಿಮಿಯರ್ ಶೋ ವೇಳೆ, ಸುದೀಪ್ ಮತ್ತು ಯಶ್ ಅನಿರೀಕ್ಷಿತ ಭೇಟಿ ಕೂಡ ಹೈಲೆಟ್ ಆಗಿತ್ತು.

ಇನ್ನೂ ಯಶ್ ಸಿನಿಮಾ ವಿಚಾರಕ್ಕೆ ಬರೋದಾದ್ರೆ, `ಟಾಕ್ಸಿಕ್’ ಮತ್ತು ಬಾಲಿವುಡ್‌ನ `ರಾಮಾಯಣ’ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ.